ಮೆಚ್ಚಿ ಜುನೇದ್ ಮತ್ತವರ ತಂಡದಿಂದ ಪೊಲೀಸರಿಗೆ ಬಿಳಿ ಬಣ್ಣದ ಶರ್ಟ್‌ಗಳ ಉಡುಗೋರೆ
ಮೈಸೂರು: ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾನಗರ, ಶಾಂತಿನಗರ ಸೇರಿಂದತೆ ವಿವಿಧ ಬಡಾವಣೆಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಮಾಧಕ ವಸ್ತುಗಳ ಮಾರಾಟ, ಸೇವನೆ ಮತ್ತು ಸಾಗಾಟವನ್ನು ನಿಯಂತ್ರಣ ಮಾಡಿರುವ ಉದಯಗಿರಿ ಪೊಲೀಸರಿಗೆ ೭೯ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಗೌಸಿಯಾನಗರದ ೩೨ನೇ ವಾರ್ಡ್ ಯೂತ್ ಕಾಂಗ್ರೆಸ್ ಮುಖಂಡ ಜುನೇದ್ ನೇತೃತ್ವದಲ್ಲಿ ಬಿಳಿ ಬಣ್ಣದ ಶರ್ಟ್‌ಗಳನ್ನು ವಿತರಣೆ ಮಾಡಿದರು.
ಉದಯಗಿರಿ ಪೊಲೀಸ್ ಠಾಣೆದ ಎದುರು ಇನ್ಸ್‌ಪೆಕ್ಟರ್ ಕೆ.ಎನ್.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಂದರ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಜುನೇದ್ ಮತ್ತು ಗೆಳೆಯರು ಪೊಲಿಸರಿಗೆ ಬಿಳಿ ಬಣ್ಣದ ಶರ್ಟ್‌ಗಳನನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಕೆ.ಎನ್.ಸುದಾಕರ್ ಅವರು ಮಾತನಾಡಿ, ಕಳೆದ ಹಲವು ದಿನಗಳಿಂದ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾಧಕ ವಸ್ತುಗಳ ಮಾರಾಟ, ಸೇವನೆ ಮತ್ತು ಸಾಗಾಟದ ಬಗ್ಗೆ ನಾವು ಕಾರ್ಯಾಚರಣೆ ನಡೆಸಿ ಹಲವು ಪ್ರಕರಣ ದಾಖಲಿಸಿದ್ದೇವೆ. ನಮ್ಮ ಠಾಣಾ ವ್ಯಾಪ್ತಿಯ ಯುವಕರು ನಿಮ್ಮ ನಿಮ್ಮ ಬಡಾವಣೆಗಳಲ್ಲಿ ಯಾವುದೇ ರೀತಿಯ ಮಾಧಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ನೀಡಿದರೆ ನಾವು ಅದನ್ನು ನಿಯಂತ್ರಣ ಮಾಡಲು ಸಾಧ್ಯ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಯುವಕರು ಪೊಲೀಸರಿಗೆ ಸಹಕಾರ ನೀಡಬೇಕು. ಈ ಬಗ್ಗೆ ನಾವು ಮೊಹಲ್ಲಾಗಳಲ್ಲಿ, ಮಸೀದಿಗಳಲ್ಲಿ ಮತ್ತು ಎಲ್ಲ ಕಡೆ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಗೌಸಿಯಾನಗರ ೩೨ನೇ ವಾರ್ಡ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಜುನೇದ್ ಮಾತನಾಡಿ, ಉದಯಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪೊಲೀಸರು ಮಾಧಕ ವಸ್ತುಗಳ ಸೇವನೆ, ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಈ ಭಾಗದಲ್ಲಿ ಮಾಧಕ ವಸ್ತುಗಳ ಮಾರಾಟ ಸಾಕಷ್ಟು ನಿಯಂತ್ರಣವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಯುವಕರ ತಂಡವು ಸದಾ ಕಾಲ ಪೊಲೀಸರಿಗೆ ಸಹಾಯ ಮಾಡುತ್ತೇವೆ. ನಮ್ಮ ಬಡಾವಣೆಗಳಲ್ಲಿ ಮಾಧಕ ವಸ್ತುಗಳ ಮಾರಾಟವು ನಿಯಂತ್ರಣವಾಗಿರುವ ಹಿನ್ನಲೆಯಲ್ಲಿ ನಾವು ಉದಯಗಿರಿ ಪೊಲೀಸರ ಕರ್ತವ್ಯವನ್ನು ಮೆಚ್ಚಿ ಇಂದು ಅವರಿಗೆ ಪ್ರೀತಿಯಿಂದ ಬಿಳಿ ಶರ್ಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐಗಳಾದ ಶಿವಶಂಕರ್, ಶ್ರೀನಿವಾಸ ಪಾಟೀಲ್, ಚಂದ್ರಶೇಖರ ಇಟಗಿ, ನಾಗರಾಜ ಅರಸ್, ಎಎಸ್‌ಐಗಳಾದ ದೊಡ್ಡಯ್ಯ, ಸಿದ್ದಾರೂಢ ಮಾದರ್, ಚಂದ್ರಶೇಖರ್, ಸಾಕಮ್ಮ, ಹೆಡ್ ಕಾನ್ಸ್‌ಟೇಬಲ್ ರಾಜು ಮತ್ತು ನಾಗೇಶ್, ಗೌಸಿಯಾನಗರ ಮತ್ತು ಶಾಂತಿನಗರ ಬಡಾವಣೆಯ ಯುವಕರಾದ ಅಸ್ಲಂ ಪಾಷ, ವಸೀಂ ಷರೀಫ್, ಸೈಯದ್ ಮುಬಾರಕ್, ಶುಜ್ಜಾತ್ ಪಾಷ, ಸೈಯದ್ ಹಫೀಜ್, ಮೊಹಮ್ಮದ್ ಸಲೀಂ, ಮುದಸ್ಸಿರ್, ಸಾದಿಖ್, ವಸೀಂ ಖಾನ್, ತನ್ಸೀರ್ ಖಾನ್, ನಯಾಜ್ ಪಾಷ, ನಿಸಾರ್ ಅಹಮದ್ ಸೇರಿದಂತೆ ಇತರರು ಇದ್ದರು.