ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ರಷ್ಯಾ – ಉಕ್ರೇನ್ ನಡುವಣ ಕದನ ವಿರಾಮದ ಬಗ್ಗೆ ರಷ್ಯಾ ನಾಯಕ ವ್ಲಾಡಿಮಿರ್ ಪುಟಿನ್ ಯಾವುದೇ ಪೂರ್ಣ ಪ್ರಮಾಣದ ಶಾಂತಿ ಒಪ್ಪಂದ ನಡೆಯದ ಹಿನ್ನಲೆ ಟ್ರಂಪ್ ಕದನ ವಿರಾಮವನ್ನು ಕೈಬಿಟ್ಟಿದ್ದಾರೆ.
ಅಲಾಸ್ಕಾದಲ್ಲಿ ನಡೆದ ಮಹತ್ವದ ಸಭೆಗೂ ಮುನ್ನ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕ – ರಷ್ಯಾ ಶೃಂಗಸಭೆಯಲ್ಲಿ ನಾವು ಕದನ ವಿರಾಮವನ್ನು ಬಯಸುತ್ತಿದ್ದೇವೆ, ಒಂದು ವೇಳೆ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಪ್ಪದಿದ್ದರೆ ತುಂಬಾ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು.
ಕದನ ವಿರಾಮದಿಂದ ದೂರ ಸರಿಯುವುದು ಪುಟಿನ್‌ಗೆ ಅನುಕೂಲಕರವಾಗಿದೆ ಎಂದು ಅನ್ನಿಸುತ್ತಿದೆ. ಪುಟಿನ್ ಅಂತಿಮ ಶಾಂತಿ ಒಪ್ಪಂದದ ಕುರಿತು ಮಾತುಕತೆಗಾಗಿ ದೀರ್ಘಕಾಲದಿಂದ ವಾದಿಸುತ್ತಿದ್ದಾರೆ. ಆದರೆ ಉಕ್ರೇನ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಈ ತಂತ್ರವನ್ನು ಸಮಯವನ್ನು ಖರೀದಿಸಲು ಮತ್ತು ರಷ್ಯಾದ ಯುದ್ಧಭೂಮಿಯ ಮುನ್ನಡೆಗಳನ್ನು ಒತ್ತಾಯಿಸಲು ಒಂದು ಮಾರ್ಗ ಎಂದು ಟ್ರಂಪ್ ಟೀಕಿಸಿದ್ದಾರೆ.
ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ಬಳಿಕ ವಾಷಿಂಗ್ಟನ್‌ಗೆ ಹಿಂದಿರುಗುವಾಗ ವಿಮಾನದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಮಾತನಾಡಿದ ಟ್ರಂಪ್, ರಷ್ಯಾ ಮತ್ತು ಉಕ್ರೇನ್ ನಡುವಿನ ಭಯಾನಕ ಯುದ್ಧವನ್ನು ಕೊನೆಗೊಳಿಸಲು ಉತ್ತಮ ಮಾರ್ಗವೆಂದರೆ ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ನೇರವಾಗಿ ಹೋಗುವುದು ಎಂದು ಹೇಳಿದರು.
ಈ ಹಿಂದೆ ಪುಟಿನ್ ಬಗ್ಗೆ ಕಿಡಿಕಾರುತ್ತಿದ್ದ ಟ್ರಂಪ್ ಇದೀಗ, ರಷ್ಯಾ ಹಿಡಿತದಲ್ಲಿರುವ ಎರಡು ಉಕ್ರೇನ್ ಪ್ರದೇಶಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುವ ಮತ್ತು ಇತರ ಎರಡು ಪ್ರದೇಶಗಳಲ್ಲಿ ಮುಂಚೂಣಿಯನ್ನು ಸ್ಥಗಿತಗೊಳಿಸುವ ಪುಟಿನ್ ಅವರ ಪ್ರಸ್ತಾಪಕ್ಕೆ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಡೊನಾಲ್ಡ್ ಟ್ರಂಪ್ 2022ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಇದ್ದರೆ ಉಕ್ರೇನ್ ಜೊತೆ ಯುದ್ಧವೇ ನಡೆಯುತ್ತಿರಲಿಲ್ಲ ಎಂದಿದ್ದಾರೆ. ನನ್ನ ಉಪಸ್ಥಿತಿಯಿದ್ದರೆ ರಷ್ಯಾವನ್ನು ಆಕ್ರಮಣ ಮಾಡುವುದನ್ನು ತಡೆಯಬಹುದಿತ್ತು ಎಂದು ಟ್ರಂಪ್ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದರು.
ಟ್ರಂಪ್ ಆಗ ಅಧ್ಯಕ್ಷರಾಗಿ ಇದ್ದರೆ ಯುದ್ಧ ಮಾಡಲು ಬಿಡುತ್ತಿರಲಿಲ್ಲ. ಉಕ್ರೇನ್ ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂಬ ಟ್ರಂಪ್ ಅವರ ಮಾತಿಗೆ ನನ್ನ ಸಹಮತವಿದೆ. ಪರಸ್ಪರ ತಿಳುವಳಿಕೆ ಉಕ್ರೇನ್‌ಗೆ ಶಾಂತಿ ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಪುಟಿನ್ ತಿಳಿಸಿದ್ದಾರೆ.
ರಷ್ಯಾದೊಂದಿಗೆ ಮೂರು ವರ್ಷಗಳಿಂದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್ ಅದನ್ನು ನಿಲ್ಲಿಸಲು ಒಪ್ಪಂದವನ್ನು ಮಾಡಿಕೊಳ್ಳುವ ಜವಾಬ್ದಾರಿ ಈಗ ಅದರ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮೇಲಿದೆ. ನಾನು ಮತ್ತು ಯುರೋಪಿಯನ್ ರಾಷ್ಟ್ರಗಳು ಈ ಬಗ್ಗೆ ಸ್ವಲ್ಪ ಮಟ್ಟಿಗೆ ಪ್ರಯತ್ನಗಳನ್ನು ಮಾಡಬಹುದಷ್ಟೇ. ಆದರೆ ಯುದ್ಧವನ್ನು ಕೊನೆಗೊಳಿಸುವ ಜವಾಬ್ದಾರಿ ಝೆಲೆನ್ಸ್ಕಿಯ ಮೇಲಿದೆ ಎಂದು ಪುಟಿನ್ ಹೇಳಿದ್ದಾರೆ.