ಚಾಮರಾಜನಗರ: ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ವೈಭವ, ಶ್ರದ್ಧಾ , ಸಂತೋಷದ ,ಭಕ್ತಿಯ ವಾತಾವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಿತು.
ಇಂದು ಸಂಜೆ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ನೂರಾರು ಕೃಷ್ಣ, ರಾಧೆಯ ವೇಷದಲ್ಲಿ ಬೆಣ್ಣೆ ತೆಗೆದು, ಶ್ರೀಕೃಷ್ಣನ ಹಾಡು, ನುಡಿಗಳನ್ನು, ಹೇಳಿ ಮಕ್ಕಳು ಪೋಷಕರು ಸಂಭ್ರಮಿಸಿದರು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿ ಕೆ ದಾನೇಕ್ವರಿ ಮಾತನಾಡಿ ಶ್ರೀ ಕೃಷ್ಣ ಅಂದದ, ಸಂತಸದ ,ಸಂತೋಷದ ಪ್ರತೀಕ. ಕೃಷ್ಣನಂತೆ ಆಗಬೇಕು ಎಂಬ ಕನಸು ಪ್ರತಿಯೊಬ್ಬ ತಾಯಿಯಲ್ಲಿ ಇರುತ್ತದೆ. ಕೃಷ್ಣನ ಬಾಲ ಲೀಲೆಯನ್ನು ನೋಡುವಾಗ ತಂದೆ ತಾಯಿ ಬಂಧು ಬಳಗ ತುಂಬಾ ಸಂತೋಷ ಪಡುತ್ತಾರೆ. ಮಕ್ಕಳು ಉತ್ತಮ ಭಾವನೆ, ಗುಣಗಳನ್ನು ಬೆಳಸಿಕೊಳ್ಳಬೇಕು ಎಂದರು.
ಶ್ರೀಕೃಷ್ಣ ಜನ್ಮಾಷ್ಟಮಿ. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ.ಮಾತನಾಡಿ.ಮನುಷ್ಯನ ದುಃಖಗಳು ಹೋಗಲು ತಾಯಿ, ಮಕ್ಕಳು ಹಾಗು ಗೋವಿನ ಪ್ರೀತಿಯ ಸ್ಪರ್ಶ ಎಲ್ಲಾ ದುಃಖ ಗಳನ್ನು ನಿವಾರಿಸುತ್ತದೆ. ಕೃಷ್ಣನ ವೇಷಧರಿಸಿ ಇಡೀ ಕುಟುಂಬ , ಸಮಾಜ ,ಆನಂದ ಪಡುವುದನ್ನು ಕಾಣಬಹುದು. ಶ್ರೀಕೃಷ್ಣ ಭಾರತದ ಸಂಸ್ಕೃತಿಯಲ್ಲಿ ಪ್ರಭಾವಶಾಲಿ ವ್ಯಕ್ತಿತ್ತ್ವ ರೂಪಿಸಿದ್ದಾನೆ. ವಿಶ್ವ ಕಲ್ಯಾಣದ ಭಗವದ್ಗೀತೆಯನ್ನು ನೀಡಿ ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಳ್ಳಿ ಹಳ್ಳಿ ಗಳಲ್ಲಿ ಶ್ರೀ ಕೃಷ್ಣನ ವಿಚಾರ, ಭಗವದ್ಗೀತೆಯ ಸಂದೇಶ ಹರಡಬೇಕು. ಕೃಷ್ಣ ಜನ್ಮಾಷ್ಟಮಿ ಮೂಲಕ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಭಾವ, ವೈಶಿಷ್ಟ್ಯ ತಿಳಿಸಬೇಕು ಎಂದರು.
ಹರವೆ ಗ್ರಾಮದ ಗ್ರಾಮಾಧೀಕಾರಿ ಶ್ರೀಧರ್ ಶ್ರೀ ಕೃಷ್ಣನ ಜನ್ಮ ರಹಸ್ಯ, ಕೃಷ್ಣನ ಸಂದೇಶಗಳನ್ನು. ವಿವರಿಸಿದರು.
ಕಾರ್ಯಕ್ರಮದಲ್ಲಿ ವರ್ತಕ ರಾದ ಶ್ರೀನಿವಾಸ್,ಬಿಕೆ ಆರಾಧ್ಯ, ಪ್ರಮೀಳಾ ಊದಗಡ್ಡಿ,ಸತೀಶ್, ಶಿವಕುಮಾರ್, ನಾಗು ರಮೇಶ್, ಗುರುರಾಜು, . ಜ್ಯೋತಿಮಾತ, ನಾಗರಾಜ್, ಸಿದ್ಧಯ್ಯ.ಪುಟ್ಟಶೇಖರ ಮೂರ್ತಿ ಮುಂತಾದವರು ಇದ್ದರು. ಎಲ್ಲಾ ಕೃಷ್ಣ ರಾಧೆ ವೇಷ ಧಾರಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.