ಹುಣಸೂರು: ಇತ್ತೀಚಿಗೆ ಅಗರನಹಳ್ಳಿ ಮಂಟಿಕೊಪ್ಪಲು ಕುಮಾರ್. ತಾಲೂಕಿನ ದಲಿತ ನಾಯಕ ಬಿಳಿಕೆರೆ ರಾಜು ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ದಲಿತ ಯುವ ಮುಖಂಡ ಹಳೇಪುರ ಕಾಂತರಾಜ್ ಖಂಡಿಸಿದ್ದಾರೆ.
ದಿನಾಂಕ 21 .08.ರಂದು ರಾಜ್ಯದ ಗೃಹ ಸಚಿವ ಡಾ.ಪರಮೇಶ್ವರ್. ಅವರ ಜನ್ಮದಿನವನ್ನು ಪರಮೋತ್ಸವ ಕಾರ್ಯಕ್ರಮವನ್ನು ಮೈಸೂರಿನಲ್ಲಿ, ಅವರ ಅಭಿಮಾನಿಯದ ಬಿಳಿಕೆರೆ ರಾಜು ಅದ್ದೂರಿಯಾಗಿ, ಆಚರಿಸಲು ನಿರ್ಧರಿಸಿರುವ ಈ ಸಂದರ್ಭದಲ್ಲಿ ರಾಜು ಬಗ್ಗೆ ಹಗುರವಾಗಿ ಪತ್ರಿಕಾ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾದವೆಂದರು.
ತಾಲೂಕಿನಲ್ಲಿ 43 ವರ್ಷ ದೇವರಾಜ ಅರಸು ಮತ್ತು ಅವರ ಮಕ್ಕಳೊಂದಿಗೆ ಸುದೀರ್ಘ ರಾಜಕೀಯ ಮಾಡಿರುವ ರಾಜು ಬಿಳಿಕೆರೆ ಎಲ್ಲಿ. ನೆನ್ನೆ ಮೊನ್ನೆ ರಾಜಕೀಯಕ್ಕೆ ಬಂದು ಸಾರ್ವಜನಿಕರಿಗೆ ವಂಚನೆ ಮಾಡಿ. ಬದುಕು ನಡೆಸುತ್ತುರುವ ಇವನೆಲ್ಲಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ವಕೀಲ ಮಧು ಕುಮಾರ್, ಮುಖಂಡರಾದ ಆಸ್ವಾಳ್ ಶಿವರಾಜ್, ಹಳ್ಳದ ಕೊಪ್ಪಲು ನಾಗರಾಜು, ಮಾರನಹಳ್ಳಿ ಸೋಮಶೇಖರ್ ಇದ್ದರು.