ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ವ್ಯಾಪ್ತಿಗೆ ಒಳಪಡುವ ಕೊಮಾರನಪುರ ಗ್ರಾಮದಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಸುಂದರ್ ಸುರಕ್ಷಿತರವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ಸಿದ್ದರಾಮು ಎಂಬುವರ ಜಮೀನಿನಲ್ಲಿ ಈ ಹೆಬ್ಬಾವು ಕಬ್ಬು ಕಟಾವು ಮಾಡುವ ವೇಳೆ ಕಂಡು ಬಂದಿದೆ. ಇವರು ಉರಗ ತಜ್ಞ ಸ್ನೇಕ್ ಸುಂದರ್‌ರವರಿಗೆ ಮೊಬೈಲ್ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಂದರ್ ಹಾವನ್ನು ಸುರಕ್ಷಿತವಾಗಿ ಹಿಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಅಧಿಕಾರಿ ಮಧು ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕಾಡಿನಲ್ಲಿ ಈ ಹಾವನ್ನು ಇಲಾಖೆಯ ಸಿಬ್ಬಂಧಿ ಪ್ರವೀಣ್, ಕಿರಣ್, ಮರಿಸ್ವಾಮಿ ಅವರೊಂದಿಗೆ ತೆರಳಿ ಇದನ್ನು ಬಿಟ್ಟಿದ್ದಾರೆ.
ಈ ಹಾವು ೧೨ ಅಡಿ ಉದ್ದ, ೩೦ ಕಿಲೋ ತೂಕವನ್ನು ಹೊಂದಿತ್ತು ಎನ್ನಲಾಗಿದೆ. ಹೆಬ್ಬಾವು ಸಾಮಾನ್ಯವಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಕಂಡು ಬರುತ್ತದ. ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಬಳಿಯಲ್ಲಿರುವ ಕಾಡಂಚಿನ ಗ್ರಾಮಗಳಲ್ಲಿ ಈ ಹಾವುಗಳು ಆಗಾಗ ಕಂಡು ಬರುತ್ತದೆ. ಇಂತಹ ಹಾವುಗಳು ಕಂಡಬಂದಲ್ಲಿ ಇದಕ್ಕೆ ಯಾವುದೇ ತೊಂದರೆ ನೀಡದೆ ಮಾಹಿತಿ ನೀಡಿದರೆ ಇವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಸ್ನೇಕ್ ಸುಂದರ್ ಮಾಹಿತಿ ನೀಡಿದರು.