ಚಾಮರಾಜನಗರ: ರಾಷ್ಟ್ರದ ಶ್ರೇಷ್ಠ ಸಾಹಿತಿ ,ವಿಶ್ವದಲ್ಲೇ ಜನಪ್ರಿಯವಾಗಿರುವ ಸರಸ್ವತಿ ಸಮ್ಮಾನ್ ಪುರಸ್ಕೃತ ಶ್ರೀ ಎಸ್ ಎಲ್ ಭೈರಪ್ಪನವರ ಜನ್ಮದಿನವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಆಗಸ್ಟ್ 20ರ ಬುಧವಾರ ಸಂಜೆ ಐದು ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಎಸ್ ಎಲ್ ಭೈರಪ್ಪನವರ ಸಾಹಿತ್ಯ ಉತ್ಸವ ಹಾಗೂ ಕೊಡುಗೆಗಳು, ಪುಸ್ತಕಗಳ ವಿತರಣೆ ,ವಿಶೇಷ ಪೂಜೆ ,ಸಿಹಿ ಹಂಚಿಕೆ ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು , ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.