ಮಡಿಕೇರಿ : 66/11 ಕೆ.ವಿ ಪೊನ್ನಂಪೇಟೆ ಹಾಗೂ ಶ್ರೀಮಂಗಲ ವಿದ್ಯುತ್ ಉಪ ಕೇಂದ್ರದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆ ಈ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ನಾಳೆ ಆಗಸ್ಟ್, 21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್4 ತಿತಿಮತಿ, ಎಫ್5 ಪಾಲಿಬೆಟ್ಟ, ಎಫ್6 ಬೇಗೂರು, ಎಫ್7 ಗೋಣಿಕೊಪ್ಪ, ಎಫ್8 ಪೊನ್ನಂಪೇಟೆ, ಎಫ್9 ಹಾತೂರು, ಎಫ್10 ಹೈಸೊಡ್ಲೂರು, ಎಫ್1 ಬಿರುನಾಣಿ, ಎಫ್2 ಕುಟ್ಟ, ಎಫ್3 ಶ್ರೀಮಂಗಲ, ಎಫ್4 ಕಾನೂರು, ಎಫ್5 ಕೆ.ಬಾಡಗ, ಎಪ್6 ಬೀರುಗ, ಎಫ್7 ಟಿ.ಶೆಟ್ಟಗೇರಿ, ಈ ಫೀಡರ್‍ಗಳಿಂದ ಹೊರಹೊಮ್ಮುವ ಸುಳುಗೋಡು, ಕೋಣನಕಟ್ಟೆ, ಕೊಟ್ಟಗೇರಿ, ದೇವನೂರು, ಕಿರಗೂರು, ನಿಟ್ಟೂರು, ಜಾಗಲೆ, ಅರವತೋಕ್ಲು, ದೇವರಪುರ, ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾಥಂಗಾಲ, ತೈಲ, ಸಿಂಕೋನ, ನಾಲ್ಕೇರಿ, ಶೆಟ್ಟಿಗೇರಿ, ತಾವಳಗೇರಿ, ಇರ್ಪು, ಕಾಕೂರು, ಕುರ್ಚಿ, ತೆರಾಲು, ಪರಕಟಕೇರಿ, ಹೊಸಕೇರಿ, ಕೆ.ಎಂ.ಕೊಲ್ಲಿ, ಹರಿಹರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.