ಚಾಮರಾಜನಗರ: ಯುವಕರು ಮತ್ತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ಚಲಾವಣೆಯ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಕಾನೂನು ಪರಿಪಾಲನೆಯ ಮೂಲಕ ಸದೃಢ ಸಮಾಜವನ್ನು ನಿರ್ಮಿಸೋಣ .ಅಪಘಾತಗಳು ಹಾಗೂ ಸಂಕಷ್ಟಗಳಿಂದ ದೂರವಾಗಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಗೂ ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಈಶ್ವರ ರವರು ತಿಳಿಸಿದರು.
ಅವರು ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಾಶ್ವತ ಲೋಕ ಅದಾಲತ್ ಬಾಲ್ಯ ವಿವಾಹ , ಪೋಕ್ಸೋ ,ಮಕ್ಕಳಿಗೆ ಸಂಬಂಧಿಸಿದ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಾಲ್ಯ ವಿವಾಹ ಅಪರಾಧವಾಗಿದ್ದು 18 ಮತ್ತು 21 ವಯೋಮಿತಿಯ ಒಳಗೆ ಯಾರು ವಿವಾಹವಾಗಬಾರದು ಮತ್ತು ಪ್ರೋತ್ಸಾಹ ನೀಡಬಾರದು. ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷವಾದ ತಿಳುವಳಿಕೆ ಅಗತ್ಯವಾಗಿದೆ . ಕಾನೂನಿನ ಜಾಗೃತಿ ಹಾಗೂ ಅರಿವು ನಮ್ಮನ್ನು ಉತ್ತಮ ನಾಗರಿಕ ರನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದರು. ಹೆಣ್ಣು ಮಕ್ಕಳು ಧೈರ್ಯವಾಗಿದ್ದು ಶಿಕ್ಷಣವನ್ನು ಪಡೆಯಬೇಕು. ಯಾವುದೇ ಸಮಸ್ಯೆಗಳು ಉಂಟಾದಾಗ ಕಾನೂನಿನ ಸಹಕಾರವನ್ನು ಪಡೆಯಬೇಕು ಎಂದರು.
ಬಾಲ್ಯ ವಿವಾಹ ಪೋಕ್ಸೋ ಮಕ್ಕಳ ಹಕ್ಕುಗಳು ಹಾಗೂ ಶಾಶ್ವತ ಲೋಕ ಅದಾಲತ್ ಬಗ್ಗೆ ಗಂಗಾಧರಸ್ವಾಮಿ, ಜಯಮ್ಮ, ಲತಾ ,ನಾಗರಾಜು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪನವರು ವಹಿಸಿದ್ದರು. ಹಿರಿಯವ ಉಪನ್ಯಾಸಕರಾದ ಆರ್ ಮೂರ್ತಿ ,ಸುರೇಶ ಎನ್ ಋಗ್ವೇದಿ, ಬಸವಣ್ಣ, ಸುರೇಶ್ ಹಾಗೂ ದೊಡ್ಡಮ್ಮ ಹಾಗೂ ಪೋಷಕರು ಉಪಸ್ಥಿತರಿದ್ದರು.