Friday, August 22, 2025
Google search engine

Homeರಾಜ್ಯಸುದ್ದಿಜಾಲರಾಧ, ಕೃಷ್ಣರ ವೇಷಧರಿಸಿ ಸಂಭ್ರಮಿಸಿದ ಪುಟಾಣಿಗಳು

ರಾಧ, ಕೃಷ್ಣರ ವೇಷಧರಿಸಿ ಸಂಭ್ರಮಿಸಿದ ಪುಟಾಣಿಗಳು

ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಅದ್ಧೂರಿಯಾಗಿ ಶ್ರೀ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಇದರಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಪುಟಾಣಿ ಮಕ್ಕಳು ಶ್ರೀಕೃಷ್ಣ ರಾಧೆಯರ ಪೋಷಾಕುಗಳನ್ನು ಧರಿಸಿ ಸಂಭ್ರಮಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಸಿದ್ದಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ, ತರಭೇತಿ, ಸಂಸ್ಕೃತಿಕ ಚಟುವಟಿಕೆ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಯ ವ್ಯಾಮೋಹವನ್ನು ಮೊದಲು ಪೋಷಕ ವರ್ಗದವರು ಬಿಟ್ಟು ಸರ್ಕಾರಿ ಶಾಲೆಗಳ ಕಡೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಅಲ್ಲಿನ ವಾತಾವಣೆವನ್ನೇ ನಾವು ಇಲ್ಲಿ ನಿರ್ಮಿಸಲು ಯತ್ನಿಸುತ್ತಿದ್ದೇವೆ. ಇದರ ನಿಮಿತ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೆ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಪೋಷಕರು ಇಲ್ಲಿಗೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪ್ರಯತ್ನಿಸಬೇಕು. ಇಲ್ಲಿನ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು.

ಶಾಲೆಯಲ್ಲಿ ಕೃಷ್ಣರಾಧೆಯ ವೇಷದಲ್ಲಿ ಚಿಣ್ಣಾರಾದಿಯಾಗಿ ಪೋಷಕರೂ ಇಷ್ಟಪಡುತ್ತಾರೆ. ಆತನ ಲೀಲೆಗಳು ಎಲ್ಲರಿಗೂ ಅಚ್ಚುಮೆಚ್ಚು. ಇದನ್ನು ಪ್ರತಿನಿಧಿಸುವ ಮಕ್ಕಳು ನಮ್ಮ ಸಂಸ್ಕೃತಿಯನ್ನು ತಿಳಿಯುವ ಜೊತೆಗೆ ಅದರಲ್ಲಿ ತಾವೂ ಕೂಡ ಭಾಗಿಯಾಗಿ ಇದನ್ನು ಕಲಿಯಲು ಯತ್ನಿಸುತ್ತಾರೆ. ದ್ವಾಪರ ಯುಗದಲ್ಲಿ ಜನಿಸಿದ ಕೃಷ್ಣ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ನೀಡಿದ ಬೋಧನೆಯು ಭಗವದ್ಗೀತೆಯಾಗಿ ಕೃಷ್ಣನ ಬಾಲ್ಯಲೀಲೆಯನ್ನು ಮಕ್ಕಳು ವೇಷಭೂಷಣದಲ್ಲಿ ಪ್ರಶರ್ಶಿಸುವಂತಹಹೀ ಕಾರ್ಯಕ್ರಮ ಮಕ್ಕಳಿಗೆ ಅನುಕರಣೀಯವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಹೊಸ ಹುಮ್ಮಸ್ಸು ತುಂಬುವ ಜೊತೆಗೆ ಪೋಷಕರ ಗಮನವನ್ನೂ ಸೆಳೆಯುತ್ತದೆ. ಮಕ್ಕಳಿಗೆ ಇಂತಹ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನವಾಲಿದೆ ಎಂದರು.

ರಾಧಾ, ಕೃಷ್ಣರ ವೇಷದಲ್ಲಿ ಮಕ್ಕಳು ಆಕರ್ಷವಾಗಿ ಕಂಗೊಳಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ರಾಧ, ಸೌಭಾಗ್ಯಲಕ್ಷ್ಮೀ, ಕುಮುದ, ವರಲಕ್ಷ್ಮೀ, ಪುಪ್ಪಲತಾ, ಶ್ರೀಧರ್‌ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಜೈಗುರು, ಸದಸ್ಯರಾದ ರೂಪಾ, ಚಂದ್ರಶೇಖರ, ದುಗ್ಗಹಟ್ಟಿ ಸಿ.ಸೌಮ್ಯಡಿ.ಪಿ.ಮಹೇಶ್, ಸುಂದರ್, ಉಪ್ಪಿನಮೋಳೆ ಸತೀಶ್ ಸೇರಿದಂತೆ ಇತರರು ಹಾಜರಿದ್ದರು.

೨೨ ವೈಎಲ್‌ಡಿ ಚಿತ್ರ ೦೧

RELATED ARTICLES
- Advertisment -
Google search engine

Most Popular