ಮಂಗಳೂರು (ದಕ್ಷಿಣ ಕನ್ನಡ) : ಯೂಟ್ಯೂಬರ್ ಸಮೀರ್.ಎಂ.ಡಿ. ತನ್ನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗಾಗಿ ರವಿವಾರ ಮಧ್ಯಾಹ್ನ ಆಗಮಿಸಿ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ನಿರೀಕ್ಷಣಾ ಜಾಮೀನು ಪಡೆದಿರುವ ಸಮೀರ್ ವಿಚಾರಣೆಗಾಗಿ ಇಂದು ಮಧ್ಯಾಹ್ನ ಒಂದು ಗಂಟೆ ವೇಳೆ ವಕೀಲರೊಂದಿಗೆ ಬೆಳ್ತಂಗಡಿ ಸರ್ಕಲ್ ಇನ್ ಸ್ಪೆಕ್ಟರ್ ನಾಗೇಶ್ ಅವರ ಕಚೇರಿಗೆ ಹಾಜರಾಗಿದ್ದಾರೆ.