ಬೆಂಗಳೂರು: ನನ್ನ ಬಗ್ಗೆ ಮಾತನಾಡುವವರು ಮಾತನಾಡಲಿ, ನಾನು ಸೂಕ್ತ ವೇದಿಕೆಯಲ್ಲಿ ಆ ಬಗ್ಗೆ ಮಾತನಾಡುವುದಾಗಿ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧ ವಿಚಾರವಾಗಿ ಮಾತನಾಡಿದಂತ ಅವರು, ಈ ಹಿಂದೆ ನಾನು ಏನು ಮಾತನಾಡಿದ್ದೇನೆ ಎಂಬುದನ್ನು ತಿಳಿದುಕೊಂಡು ಮಾತನಾಡಲಿ. ಯಾರೋ ವಿರೋಧ ಮಾತ್ತಾರೆ ಅಂದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾ? ಆ ಬಗ್ಗೆ ನಾನು ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದರು.
ನಾನು ಸದ್ಯ ಮೈಸೂರು ದಸರಾ ಉದ್ಘಾಟನೆಯ ಬಗ್ಗೆ ವಿರೋಧ ಮಾಡುವ ಬಗ್ಗೆ ಪ್ರತಿಕ್ರಿಯೆ ಕೊಡೋದಿಲ್ಲ. ವಿರೋಧ ಮಾಡುವವರು ಮಾಡಲಿ. ಅದು ಅವರ ಸ್ವಾತಂತ್ರ್ಯವಾಗಿದೆ. ನಾನು ಅದಕ್ಕೆ ಪ್ರತಿಕ್ರಿಯೆ ಕೊಡೋದಿಲ್ಲ. ನಾನು ಸೂಕ್ತ ವೇದಿಕೆಯಲ್ಲೇ ಸಕ್ಷಮವಾಗಿ ಮಾತನಾಡುವುದಾಗಿ ತಿಳಿಸಿದರು.