Wednesday, August 27, 2025
Google search engine

Homeರಾಜ್ಯಧರ್ಮಸ್ಥಳ ಪ್ರಕರಣ: "ಅಂತಿಮ ತೀರ್ಪು ಮಂಜುನಾಥನದು, ಅಪಪ್ರಚಾರ ಮಾಡುವವರು ಪ್ರತಿಫಲ ಅನುಭವಿಸುತ್ತಾರೆ": ಎಚ್.ಡಿ ದೇವೇಗೌಡ

ಧರ್ಮಸ್ಥಳ ಪ್ರಕರಣ: “ಅಂತಿಮ ತೀರ್ಪು ಮಂಜುನಾಥನದು, ಅಪಪ್ರಚಾರ ಮಾಡುವವರು ಪ್ರತಿಫಲ ಅನುಭವಿಸುತ್ತಾರೆ”: ಎಚ್.ಡಿ ದೇವೇಗೌಡ

ಬೆಂಗಳೂರು : ಶ್ರೀಕ್ಷೇತ್ರ ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ನಾಯಕ ಎಚ್ ಡಿ ದೇವೇಗೌಡರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮಂಜುನಾಥ ಮಹಾಶಕ್ತ ದೇವರು. ಆತನ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಇಂತಹ ಅಪಪ್ರಚಾರ ಮಾಡುವವರೇ ಮುಂದೆ ಅದರ ಪ್ರತಿಫಲ ಅನುಭವಿಸುತ್ತಾರೆ. ಅಂತಿಮ ತೀರ್ಪು ಮಂಜುನಾಥನ ನೀಡುತ್ತಾನೆ. ಆತನ ಅನುಗ್ರಹದಿಂದಲೇ ಒಳ್ಳೆಯದಾಗುತ್ತದೆ’ ಎಂದು ಎಚ್.ಡಿ ದೇವೇಗೌಡರು ಹೇಳಿದ್ದಾರೆ.

‘ಸಮಾಜದಲ್ಲಿ ಎಲ್ಲ ರೀತಿಯ ಜನ ಇದ್ದಾರೆ. ನಾವು ಆ ದೇವರ ಬಳಿ ಪ್ರಾರ್ಥನೆ ಮಾಡಬೇಕು ಅಷ್ಟೇ. ಅಂತಿಮ ತೀರ್ಮಾನ ನೀನೇ ಕೊಡಪ್ಪಾ ಅಂತಾ ಕೇಳಬೇಕು ಅಷ್ಟೇ’ ಎಂದು ದೇವೇಗೌಡರು ಹೇಳಿದರು.

‘ಯಾವುದೇ ರೀತಿಯ ಸಮಸ್ಯೆ ಆದರೂ ಎಲ್ಲವೂ ತಾತ್ಕಾಲಿಕ ಅಂತಿಮ ಫಲಿತಾಂಶ ಇದೆಯಲ್ಲವೇ ಅದು ಅವನ ಅನುಗ್ರಹ ದಿಂದ ಒಳ್ಳೆಯದೇ ಆಗಲಿದೆ. ಮಂಜುನಾಥನ ಶಕ್ತಿಯನ್ನು ಯಾರೂ ಕಡಿಮೆ ಮಾಡಲು ಆಗಲ್ಲ. ಅಪಪ್ರಚಾರ ಮಾಡುವವರೇ ಮುಂದೆ ಕಷ್ಟಕ್ಕೆ ಸಿಲುಕುತ್ತಾರೆ ಕಾದು ನೋಡಿ. ಇವತ್ತು ಅಪಪ್ರಚಾರ ಮಾಡುತ್ತಿರುವವರು ಮುಂದೆ ಪ್ರತಿಫಲ ಅನುಭವಿಸುತ್ತಾರೆ’ ಎಂದು ಎಚ್.ಡಿ ದೇವೇಗೌಡರು ಹೇಳಿದರು.

ಧರ್ಮಸ್ಥಳದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ದೇವೇಗೌಡರು ಅಪಪ್ರಚಾರದ ವಿರುದ್ಧವಾಗಿ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ. ‘ಏನೇ ಏರುಪೇರು ಆದರೂ ಎಲ್ಲವೂ ತಾತ್ಕಾಲಿಕ. ಅಂತಿಮ ಫಲಿತಾಂಶ ಇದ್ದೇ ಇದೆ. ಕಾದು ನೋಡಿ ಇವತ್ತು ಅಪ ಪ್ರಚಾರ ಮಾಡುತ್ತಿರುವವರು ಮುಂದೆ ದೊಡ್ಡ ಸಮಸ್ಯೆಗೆ ಸಿಲುಕುತ್ತಾರೆ’ ಎಂದು ಗೌಡರು ಹೇಳಿದರು.

‘ಧರ್ಮಸ್ಥಳ ಪ್ರಕರಣದ ತನಿಖೆ ಶೀಘ್ರವೇ ಅಂತ್ಯವಾಗಿ, ಎಸ್​ಐಟಿ ಅಧಿಕಾರಿಗಳು ವರದಿ ಸಲ್ಲಿಕೆ ಮಾಡಲಿದ್ದಾರೆ. ಆಗ ಪ್ರಕರಣದ ಕುರಿತ ಸಕಲ ಮಾಹಿತಿ ದೊರೆಯಲಿದೆ. ಯಾರು ತಪ್ಪು ಮಾಡಿದ್ದಾರೆ? ಯಾರು ಷಡ್ಯಂತ್ರ ಹೆಣೆದಿದ್ದಾರೆ ಎಂಬ ಸತ್ಯ ಹೊರಗೆ ಬರುತ್ತದೆ. ತಪ್ಪು ಮಾಡಿದವರಿಗೆ ಆ ಮಂಜುನಾಥ ಸ್ವಾಮಿಯ ಇಚ್ಛೆಯಂತೆಯೇ ಶಿಕ್ಷೆ ಸಿಗುತ್ತದೆ’ ಎಂದು ಎಚ್ ಡಿ ದೇವೇಗೌಡರು ಹೇಳಿದ್ದಾರೆ.

ಗಣೇಶ ಹಬ್ಬದ ಸಂಭ್ರಮದಲ್ಲಿ ದೇವೇಗೌಡ
ತಮ್ಮ ಮನೆಯಲ್ಲಿ ಪತ್ನಿ ಚೆನ್ನಮ್ಮರೊಂದಿಗೆ ಗಣೇಶ ಹಬ್ಬವನ್ನು ಆಚರಿಸಿದ ಮಾಜಿ ಪ್ರಧಾನಿ ದೇವೇಗೌಡರು, ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ‘ಗಣಪತಿಯ ಮೇಲಿನ ನಮ್ಮ ವಿಶ್ವಾಸವು ಕಳೆದ ಎಪ್ಪತ್ತು ವರ್ಷಗಳಿಂದ ಅಚಲವಾಗಿದೆ’ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular