Friday, August 29, 2025
Google search engine

Homeರಾಜ್ಯಸುದ್ದಿಜಾಲಬೆಳ್ತಂಗಡಿಯಲ್ಲಿ ಕುತೂಹಲದ ಬೆಳವಣಿಗೆ: ಸುಳ್ಳು ದೂರಿನ ಆರೋಪದ ಮೇರೆಗೆ ಸುಜಾತ ಭಟ್ ಬಂಧನ ಸಾಧ್ಯತೆ?

ಬೆಳ್ತಂಗಡಿಯಲ್ಲಿ ಕುತೂಹಲದ ಬೆಳವಣಿಗೆ: ಸುಳ್ಳು ದೂರಿನ ಆರೋಪದ ಮೇರೆಗೆ ಸುಜಾತ ಭಟ್ ಬಂಧನ ಸಾಧ್ಯತೆ?

ಬೆಳ್ತಂಗಡಿ: ಸುಳ್ಳು ದೂರು ಆರೋಪದಲ್ಲಿ ಯಾವುದೇ ಕ್ಷಣದಲ್ಲಾದರೂ ಸುಜಾತ ಭಟ್ ಅವರನ್ನು ಎಸ್ಐಟಿ ಬಂಧಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ವಿರುದ್ಧ ಸುಳ್ಳು ದೂರು ಆರೋಪ ಕೇಳಿ ಬಂದಿತ್ತು. ಸುಳ್ಳು ಸಾಕ್ಷಿ ಸೃಷ್ಟಿ ಆರೋಪದಲ್ಲಿ ಅವರನ್ನು ಎಸ್ಐಟಿ ಬಂಧಿಸಲಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಬೆಳ್ತಂಗಡಿಯ ಎಸ್ಐಟಿ ಪೊಲೀಸ್ ಠಾಣೆಗೆ ವಿಚಾರಣೆಗೆ ಸುಜಾತಾ ಭಟ್ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡಿದ್ದರು. ಎಲ್ಲವೂ ಸುಳ್ಳು ಹೇಳಿರೋದಾಗಿ ತಪ್ಪೊಪ್ಪಿಕೊಂಡಿದ್ದರು. ಅನನ್ಯಾ ಭಟ್ ಎಂಬ ಮಗಳು ಇಲ್ಲ ಎಂಬುದಾಗಿಯೂ ಸುಜಾತಾ ಭಟ್ ಎಸ್ಐಟಿ ಮುಂದೆ ತಿಳಿಸಿದ್ದರು.

ಈ ಹಿನ್ನಲೆಯಲ್ಲಿ ದೂರುದಾರೆ ಸುಜಾತಾ ಭಟ್ ಅವರನ್ನು ಎಸ್ಐಟಿ ಪ್ರಕರಣದಲ್ಲಿ ಸುಳ್ಳು ದೂರು ನೀಡಿದ್ದರಿಂದ ಬಂಧಿಸೋ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular