ಮೈಸೂರು: ಶಿಕ್ಷಣವೇ ಸಮಾಜಕ್ಕೆ ನೀಡುವ ಶ್ರೇಷ್ಠ ಸೇವೆ ಎಂದು ರಾಜೇಂದ್ರ ಶ್ರೀಗಳು ನಂಬಿದ್ದರು ಮತ್ತು ಅದರಲ್ಲಿ ದೃಢವಾದ ವಿಶ್ವಾಸವನ್ನು ಹೊಂದಿದ್ದರುಎಂದುಕೇಂದ್ರದ ಕೃಷಿ, ರೈತಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ರವರು ಮೈಸೂರು ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಇಂತಹ ಸಮಾಜಮುಖಿ ಭಾವನೆಯೊಂದಿಗೆ ರಾಜೇಂದ್ರ ಶ್ರೀಗಳು ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾನಿಲಯಗಳನ್ನೊಳಗೊಂಡ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.ಇದರಿಂದಾಗಿ ಲಕ್ಷಾಂತರ ಬಡ ಮತ್ತುಗ್ರಾಮೀಣ ಅಕ್ಷರ ವಂಚಿತ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವಾಯಿತು.ಇಂದುಅವರು ಸ್ಥಾಪಿಸಿದ ಸಂಸ್ಥೆಗಳು ಜ್ಞಾನದ ದಾರಿದೀಪಗಳಾಗಿವೆ. ಇಲ್ಲಿ ಶಿಕ್ಷಣ ಪಡೆದವೈದ್ಯರು, ಇಂಜಿನಿಯರಗಳು, ಶಿಕ್ಷಕರು ಮತ್ತು ನಾಯಕರುಗಳು ಉತ್ತಮ ಸಂಸ್ಕಾರವಂತ ವ್ಯಕ್ತಿಗಳಾಗಿ ರೂಪುಗೊಂಡುದೇಶ ಮಾತ್ರವಲ್ಲದೆ, ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ.
ರಾಜೇಂದ್ರ ಶ್ರೀಗಳ ಜೀವನ ‘ಸರ್ವಜನ ಹಿತಾಯ ಸರ್ವಜನ ಸುಖಾಯ’ ಎಂಬ ಮಾತಿಗೆ ಅದ್ಭುತವಾದ ಉದಾಹರಣೆಯಾಗಿದೆ. ಅವರುತಮ್ಮಜೀವನದ ಪ್ರತಿಕ್ಷಣವನ್ನುಧರ್ಮದರಕ್ಷಣೆ ಮತ್ತುಕಾಯಕಕ್ಕಾಗಿ ಮೀಸಲಿಟ್ಟಿದ್ದರು.ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿನಿಲಯಗಳನ್ನು ತೆರೆಯುವ ಮೂಲಕ ಮಾನವ ಸೇವೆಯೇ ನಿಜವಾದ ಭಗವಂತನ ಸೇವೆ ಎಂದು ನಂಬಿದ್ದರು.ಅಂತಹ ಪೂಜ್ಯರಸ್ಮರಣೆಯಲ್ಲಿ ಪಾಲ್ಗೊಂಡಿದ್ದು ನನಗೆ ಅತ್ಯಂತಧನ್ಯತಾ ಭಾವವನ್ನು ಮೂಡಿಸಿದೆ.ಉದಾರಚರಿತಾನಾಂತು ವಸುದೈವಕುಟುಂಬಕಂಎಂದು ಸಾವಿರಾರು ವರ್ಷಗಳ ಹಿಂದೆಯೇಇಲ್ಲಿನ ಸಂತರು, ಮಹಾತ್ಮರು ಸಾರಿದ್ದಾರೆ.ಭಾರತದಲ್ಲಿ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಸದ್ಭಾವನೆಯಗುಣವಿದೆ. ಭಾರತಜಗತ್ತಿಗೆ ಸದಾ ವಿಶ್ವಕಲ್ಯಾಣದ ಸಂದೇಶವನ್ನು ನೀಡುತ್ತಿದೆಎಂದು ಹೇಳಿದರು.
ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು ಮೈಸೂರಿಗೆಅರಮನೆಗರಿಮೆಯಾದರೆ, ಸುತ್ತೂರು ಶ್ರೀಮಠ ಹಿರಿಮೆಯಾಗಿದೆ.ಸಮಾಜದಲ್ಲಿ ಶಾಂತಿ, ಸೌಹಾರ್ದ ಸ್ಥಾಪನೆಗಾಗಿಯೇ ಸ್ಥಾಪನೆಯಾದ ಮಠವಿದು.ವಚನಕಾರರಾದ ಶ್ರೀ ಘನಲಿಂಗ ಶಿವಯೋಗಿಗಳು, ಶ್ರೀ ಮಂತ್ರಮಹರ್ಷಿಗಳಂತಹ ಪೂಜ್ಯರನ್ನು ಸಮಾಜಕ್ಕೆಕೊಡುಗೆಯಾಗಿ ನೀಡಿದೆ.ಅಕ್ಷರಕ್ರಾಂತಿಯನ್ನು ಮಾಡಿದರಾಜೇಂದ್ರ ಶ್ರೀಗಳು ನಾಡಿನಉದ್ದಗಲಕ್ಕೂ ಮಠದ ಸೇವಾ ಕಾರ್ಯಗಳನ್ನು ಎಲ್ಲಕ್ಷೇತ್ರಕ್ಕೂ ವಿಸ್ತರಿಸಿದರು.ಅವರು ಮಾತ್ರಉದ್ಧಾರವಾಗದೇ, ಎಲ್ಲರ ಬದುಕನ್ನು ಉದ್ಧಾರವಾಗಿಸಿದರು. ಭವಸಾಗರದಿಂದ ಎಲ್ಲರನ್ನೂದಾಟಿಸುವ ಕೆಲಸವನ್ನು ಮಾಡಿದರು.ಬಹಳ ಕಷ್ಟಕಾಲದಲ್ಲಿ ಪ್ರಸಾದನಿಲಯಗಳನ್ನು ತೆರೆದರು.ಅನೇಕ ಕಷ್ಟದ ಸಂದರ್ಭಗಳಲ್ಲಿಯೂತ್ಯಾಗದಿಂದಪ್ರಸಾದನಿಲಯಗಳನ್ನು ಮುನ್ನಡೆಸಿದ್ದಾರೆ.ರಾಜೇಂದ್ರ ಶ್ರೀಗಳು ಈ ಭಾಗದಜನರಿಗೆದಾರಿದೀಪವಾದರು. ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಬಹಳ ದೊಡ್ಡಜ್ಯೋತಿಯಾಗಿಎಲ್ಲರನ್ನೂಕೈಹಿಡಿದು ಮುನ್ನಡೆಸುತ್ತಿದ್ದಾರೆ.ಸುತ್ತೂರು ಮತ್ತು ಸಿದ್ಧಗಂಗಾ ಶ್ರೀಮಠಗಳ ಮಧ್ಯೆ ಅವಿನಾಭಾವ ಸಂಬಂಧವಿದೆ.ಶಿವಕುಮಾರ ಶ್ರೀಗಳು ಮತ್ತುರಾಜೇಂದ್ರ ಶ್ರೀಗಳು ಸಮಾಜಎರಡು ಕಣ್ಣುಗಳಿದ್ದಂತೆ ಎಂದು ಗವಿಮಠದಶ್ರೀ ಗೌರಿಶಂಕರಸ್ವಾಮಿಗಳು ಹೇಳುತ್ತಿದ್ದರೆಂದುಸ್ಮರಿಸಿದರು.
ಇದೇ ಸಂದರ್ಭದಲ್ಲಿ ‘ಸರ್ವದರ್ಶನ ಸಂಗ್ರಹ’ ಮತ್ತು ‘ಕಾಯಕ ತಪಸ್ವಿ’ ಕೃತಿಗಳ ನಾಲ್ಕನೇ ಆವೃತ್ತಿಗಳು ಹಾಗೂ ‘ಪ್ರಸಾದ’ ಮತ್ತು ‘ಜೆಎಸ್‌ಎಸ್ ವಾರ್ತಾಪತ್ರ’ಗಳ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜಒಡೆಯರ್‌ರವರು, ಶಾಸಕರುಗಳಾದ ಎ.ಆರ್.ಕೃಷ್ಣಮೂರ್ತಿ, ಹೆಚ್.ಎಂ.ಗಣೇಶ್‌ಪ್ರಸಾದ್, ಟಿ.ಎಸ್. ವತ್ಸರವರುಗಳು ಮಾತನಾಡಿದರು.ಶಾಸಕರು ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರಾದ ಅನಿಲ್ ಚಿಕ್ಕಮಾದು,ಶಾಸಕರು ಹಾಗೂ ಮಾಜಿ ಸಚಿವರಾದ, ಜಿ.ಟಿ. ದೇವೇಗೌಡ, ಶಾಸಕರುಗಳಾದ ಕೆ. ವಿವೇಕಾನಂದರವರು,ದರ್ಶನ್‌ಧ್ರುವನಾರಾಯಣ್, ಮಾಜಿ ಶಾಸಕರುಗಳಾದ ತೋಂಟದಾರ್ಯ, ಬಾಲರಾಜ್, ಸಿ.ಎಸ್. ನಿರಂಜನಕುಮಾರ್ ಮೊದಲಾದವರುಗಳು ಉಪಸ್ಥಿತರಿದ್ದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷರಾದಡಾ. ಸಿ. ಸೋಮಶೇಖರ್ ಸ್ವಾಗತಿಸಿದರು. ಪ್ರೊ.ಮೊರಬದ ಮಲ್ಲಿಕಾರ್ಜುನರವರು ವಂದಿಸಿದರು. ಕೆ.ಜಿ.ವಿನುತ, ರೂಪಗುರುಪ್ರಸಾದ್ ಕು.ಭಾರತಿ, ಕು.ಭಾನುಮತಿ ಮತ್ತುತಂಡದವರುಪ್ರಾರ್ಥಿಸಿದರು.ಪ್ರೊ.ಕೆ.ಎಸ್. ಸುರೇಶ್‌ಕಾರ್ಯಕ್ರಮ ನಿರೂಪಿಸಿದರು.