ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವ್ಯಕ್ತಿಯ ನಡತೆ, ಕೌಶಲ್ಯ, ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಶ್ರೇಷ್ಠವಾದುದು ಎಂದು ಕುಪ್ಪಹಳ್ಳಿ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಎಸ್. ವಸಂತಕುಮಾರ್ ಹೇಳಿದರು. ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಕ್ಲಸ್ಟರ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಭೇರ್ಯ ಶಾಲೆಯ ಹಿರಿಯ ಶಿಕ್ಷಕರಾದ ಹಂಪಾಪುರ ಬಾಲಕೃಷ್ಣ ಸರ್ ರವರ ವಯೋನಿವೃತ್ತಿಯ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸುಧೀರ್ಘ 27 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಪ್ರಮಾಣಿಕ ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಭೇರ್ಯ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ತಂದ್ರೆಕೊಪ್ಪಲು ರೇವಣ್ಣ, ಮುಖ್ಯ ಶಿಕ್ಷಕರಾದ ಭೇರ್ಯ ಶಿವಪ್ಪ, ಚಂದ್ರನಾಯಕ, ಸಹಶಿಕ್ಷಕರಾದ ಜಲೇಂದ್ರ, ಚಂದ್ರಕುಮಾರ,
ಕುಮಾರಶಟ್ಟಿ, ಮಹದೇವ, ಮೋಹನಕುಮಾರ, ಜಯಸ್ವಾಮಿ, ದಶರಥ, ಜಯಮಾಲ,
ಚೂಡಮಣಿ, ಪ್ರತಿಮಾ, ವನೀತಾಬಾಯಿ, ಸುಧಾಮಣಿ, ನಿವೃತ್ತ ಶಿಕ್ಷಕರಾದ ಗೇರದಡ ಸ್ವಾಮಿ, ಸಣ್ಣಮೋಗಯ್ಯ, ರಾಮಕೃಷ್ಣ, ಶಾಲೆಯ ಸಹಶಿಕ್ಷಕರಾದ ಫರಾನ ಬೇಗಂ, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಗ್ರಾಮಸ್ಥರು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.