Monday, September 1, 2025
Google search engine

Homeರಾಜ್ಯಸುದ್ದಿಜಾಲನಂಜನಗೂಡಿನಲ್ಲಿ ರಾಜಋಷಿ ಭಗೀರಥ ಮಹರ್ಷಿ ಜಯಂತಿ ಆಚರಣೆ : ಮೆರವಣಿಗೆಗೆ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮೀಜಿ...

ನಂಜನಗೂಡಿನಲ್ಲಿ ರಾಜಋಷಿ ಭಗೀರಥ ಮಹರ್ಷಿ ಜಯಂತಿ ಆಚರಣೆ : ಮೆರವಣಿಗೆಗೆ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮೀಜಿ ಚಾಲನೆ

ನಂಜನಗೂಡು: ಇಂದು ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ರಾಜಋಷಿ ಶ್ರೀ ಭಗೀರಥ ಮಹರ್ಷಿ ಜಯಂತಿ ಮಹೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡು, ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಶ್ರೀ ಪುರುಷೋತ್ತಮನಂದ ಪುರಿ ಸ್ವಾಮೀಜಿ ಚಾಲನೆ ನೀಡಿ, ಮೆರವಣಿಗೆಯಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧುವನಾರಾಯಣ್ , MLC ಯತೀಂದ್ರ ಸಿದ್ದರಾಮಯ್ಯ ರವರು, ಶಾಸಕರಾದ ಪುಟ್ಟರಂಗ ಶೆಟ್ಟಿ ರವರು, ಡಿ. ರವಿಶಂಕರ್ ರವರು, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ರವರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ರವರು, ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ರವರು, ನಗರ ಬ್ಲಾಕ್ ಅಧ್ಯಕ್ಷರಾದ ಸಿ. ಎಂ ಶಂಕರ್ ರವರು, ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ ರವರು, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರಾದ ಕರಳಪುರ ನಾಗರಾಜ್ ರವರು, ಮುಗಶೆಟ್ಟಿ ರವರು, ಮುದ್ದು ಮಾದ ಶೆಟ್ಟಿ ರವರು ಸೇರಿದಂತೆ ಹಲವು ಮುಖಂಡರು, ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular