Tuesday, September 2, 2025
Google search engine

HomeUncategorizedರಾಷ್ಟ್ರೀಯವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 51 ರೂ. ಇಳಿಕೆ

ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್‌ ಬೆಲೆ 51 ರೂ. ಇಳಿಕೆ

ನವದೆಹಲಿ: ಸೆಪ್ಟೆಂಬರ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 51.50 ರೂಪಾಯಿಗಳಷ್ಟು ಇಳಿಯಲಿದೆ. ಈ ಮೂಲಕ ಹೊಸ ಬೆಲೆ 1,580 ರೂ.ಗಳಾಗಲಿದೆ. ತೈಲ ಮಾರುಕಟ್ಟೆ ಕಂಪನಿಗಳು ಈ ಬೆಲೆ ಪರಿಷ್ಕರಣೆ ಮಾಡಿದ್ದು, ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಇದಕ್ಕೂ ಮೊದಲು ಆಗಸ್ಟ್‌ನಲ್ಲಿ 33.50 ರೂ. ಕಡಿತ, ಜುಲೈನಲ್ಲಿ 58.50 ರೂ. ಕಡಿತ ಮಾಡಲಾಗಿತ್ತು. ಜೂನ್‌ನಲ್ಲಿ 24 ರೂ. ಇಳಿಕೆ ಆಗಿತ್ತು, ಆದರೆ ಮಾರ್ಚ್ನಲ್ಲಿ ಬೆಲೆ 6 ರೂ. ಹೆಚ್ಚಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾಗುವ ದರಕ್ಕೆ ಅನುಗುಣವಾಗಿ ಭಾರತದಲ್ಲಿಯೂ ಪ್ರತಿ ತಿಂಗಳು ಎಲ್ಪಿಜಿ ಬೆಲೆ ಪರಿಷ್ಕೃತವಾಗುತ್ತದೆ.

ಈ ಕ್ರಮ ವ್ಯಾಪಾರಿಗಳು ಮತ್ತು ಹೋಟೆಲ್ ಉದ್ಯಮಿಗಳಿಗೆ ಸ್ವಲ್ಪ ಪರಿಹಾರ ನೀಡಬಹುದು.

RELATED ARTICLES
- Advertisment -
Google search engine

Most Popular