ಮಂಗಳೂರು (ದಕ್ಷಿಣ ಕನ್ನಡ) ಧರ್ಮಾಧಿಕಾರಿಗಳನ್ನು ಭೇಟಿಯಾಗಿ ಧರ್ಮಸ್ಥಳ ಚಲೋಗೆ ಆಶೀರ್ವಾದ ಕೇಳಿದ್ದೇವೆ ಎಂದು ಧರ್ಮಸ್ಥಳದಲ್ಲಿ ಬಿವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಡಾ. ಹೆಗ್ಗಡೆ ಸಂಪೂರ್ಣವಾದ ಆಶೀರ್ವಾದವನ್ನು ನೀಡಿದ್ದಾರೆ. ಧರ್ಮ ಜಾಗೃತಿ ಸಮಾವೇಶ ಯಶಸ್ವಿಯಾಗುತ್ತದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗ್ತದೆ ಎಂಬ ವಿಶ್ವಾಸವಿದೆ.
ಕಾಂಗ್ರೆಸ್ ನಾಯಕರಿಗೆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆಡಳಿತ ಪಕ್ಷದವರು ಕೂಡ ಬರಲಿ. ಯಾತ್ರೆ ಮಾಡಲಿ ಸಮಾವೇಶ ಮಾಡಲಿ. ಮಂಜುನಾಥ ಸ್ವಾಮಿಯ ದರ್ಶನ ಮಾಡಲಿ. ಸದ್ಭುದ್ಧಿಯನ್ನು ಭಗವಂತ ಅವರಿಗೆ ಕೊಡಲಿ ಎಂದು ಅವರು ಹೇಳಿದ್ದಾರೆ.
– ಬಿವೈ ವಿಜಯೇಂದ್ರ