ಮೈಸೂರು: ಮೈಸೂರಿನಲ್ಲಿ ನೂತನವಾಗಿ ಆರಂಭಗೊಂಡ ರಾಜ್ಯಧರ್ಮ ಸುದ್ದಿವಾಹಿನಿ ಹಾಗೂ ಮೈಸೂರು ವಿಜಯ ದಿನ ಪತ್ರಿಕೆ ಕಛೇರಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಶುಭ ಹಾರೈಸಿದರು.

ಚಾಮುಂಡಿಪುರಂ ಸರ್ಕಲ್ ಬಳಿಯ ಆರ್.ಆರ್ .ಕಾಂಪ್ಲೆಕ್ಸ್ನಲ್ಲಿರುವ ನೂತನ ಕಛೇರಿಗೆ ಭೇಟಿ ನೀಡಿದ ಅವರು ʼರಾಜ್ಯಧರ್ಮʼ ಹೆಸರು ಚೆನ್ನಾಗಿದೆ. ವಾಹಿನಿ ಮತ್ತು ಪತ್ರಿಕೆಯನ್ನು ಜೊತೆಯಲ್ಲಿಯೇ ನಿಭಾಯಿಸಿಕೊಂಡು ಹೋಗುತ್ತಿರುವುದು ಅತ್ಯಂತ ಖುಷಿ ನೀಡಿದೆ. ಸಾಮಾನ್ಯ ಕುಟುಂಬದಿಂದ ಬಂದು ಮಾಧ್ಯಮವನ್ನು ಕಟ್ಟುವುದು ಸುಲಭದ ಮಾತಲ್ಲ. ಅದನ್ನು ಕಿರಣ್ ಮತ್ತವರ ತಂಡ ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

ಈ ಸಂದರ್ಭ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಬಾಲರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಸಚಿವ ವಿ.ಸೋಮಣ್ಣ ಆಪ್ತ ಡಿ.ಪಿ.ಉಮೇಶ್, ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ವಿನಯ್ ನಾರಾಯಣ್ ಪಂಡಿತ್, ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಪ್ರಧಾನ ಸಂಪಾದಕ ಕಿರಣ್ ಕುಮಾರ್ ಸಿ.ಎಂ, ಮೈಸೂರು ವಿಜಯ ದಿನಪತ್ರಿಕೆಯ ಸಂಪಾದಕಿ ಶ್ರೀಮತಿ ಶಿಲ್ಪಶ್ರೀ ಕೆ.ಎನ್, ರಾಜ್ಯಧರ್ಮ ಸಂಪಾದಕ ಹರ್ಷ ಸಿ.ಬಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
