ಮೈಸೂರು : ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಸೆಪ್ಟೆಂಬರ್ 7ರಂದು ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬೆಳದಿಂಗಳ ಸಂಗೀತ 283 ನಡೆಯಲಿದೆ.
2015ರಲ್ಲಿ ಅಂದಿನ ರಾಷ್ಟ್ರಪಾತಿಗಳಾಗಿದ್ದ ಪ್ರಣವ್ ಮುಖರ್ಜಿ ಅವರ ಬಳಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಯನ್ನು ಸ್ವೀಕರಿಸಿರುವ ಉದಯೋನ್ಮುಖ ಸಂಗೀತ ಕಲಾವಿದೆ ವಿದುಷಿ ಅದಿತಿ ಬಿ.ಪ್ರಹ್ಲಾದ್ ಗಾಯನಕ್ಕೆ ವಯೋಲಿನ್ ನಲ್ಲಿ ವಿದುಷಿ ಸಿ.ವಿ.ಶ್ರುತಿ, ಮೃದಂಗದಲ್ಲಿ ವಿದ್ವಾನ್ ಜಿ.ಎಸ್.ರಾಮಾನುಜಂ, ಮೋರ್ಚಿಂಗ್ ನಲ್ಲಿ ವಿದ್ವಾನ್ ವಿ.ಎಸ್.ರಮೇಶ್ ಸಾಥ್ ನೀಡಲಿದ್ದಾರೆ.