ಮೈಸೂರು: ಯುವಾ ಬ್ರಿಗೇಡ್ ಮೈಸೂರು ತಂಡದಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಕಲ್ಯಾಣಿ ಸ್ವಚ್ಚತಾ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದು ಕಲ್ಯಾಣಿಯ ಮೆಟ್ಟಿಲುಗಳ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡುವ ಮೂಲಕ ಕಲ್ಯಾಣಿ ಸ್ವಚ್ಚತೆಯನ್ನು ಮಾಡಲಾಯಿತು.
50ಕ್ಕೂ ಹೆಚ್ಚು ಯುವರ ತಂಡ ಬೆಳಿಗ್ಗೆ 6:30ಕ್ಕೆ ಸ್ವಚ್ಚತಾ ಕಾರ್ಯ ಆರಂಭಿಸಿ 10 ಗಂಟೆವರಗೂ ನಿರಂತರವಾಗು ಶ್ರಮಧಾನ ಮಾಡಲಾಯಿತು. ಈ ಸ್ವಚ್ಚತಾ ಕಾರ್ಯಕ್ಕೆ ಮೈಸೂರಿನ NIE ಕಾಲೇಜಿನ ವಿದ್ಯಾರ್ಥಿಗಳು ಸಹಾ ಪಾಲ್ಕೊ ಪಾಲ್ಗೊಂಡು ಶ್ರಮಧಾನ ಮಾಡಿದರು.

ಸ್ವಚ್ಚತಾ ಕಾರ್ಯದಲ್ಲಿ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ಮೈಸೂರು ನಗರ ಸಂಚಾಲಕ ಸಾಗರ್, ಮಹೇಂದ್ರ, ನಾರಾಯಣ್, ಕಿಶೋರ್ ,ಚರಣ್, ಶಿವು, ಧನುಷ್, ಗೌತಮ್, ರಮೇಶ್,ಹಾಗೂ NIE ಕಾಲೇಜಿನ ಸ್ಟೋಡೆಂಟ್ ವೆಲ್ ಪೇರ್ ಆಫಿಸರ್ (ವಿಧ್ಯಾರ್ಥಿ ಕಲ್ಯಾಣಾಧಿಕರಿ) ಡಾ.ಶರತ್ ಚಂದ್ರ, ಕಾಲೇಜು ವಿದ್ಯಾರ್ಥಿ ತಂಡದ ನಾಯಕ ಸಂಜನ್, ರಮಿತ, ಯಾನ ಸೀತಮ್ಮ, ಶಿವರಾಜ್ ಮರಡು, ಪ್ರಮುಕ್, ಪ್ರಸ್ತುತಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.