Monday, September 8, 2025
Google search engine

Homeರಾಜ್ಯಸುದ್ದಿಜಾಲಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ: ಹಿಂದೂಪರ ಸಂಘಟನೆಗಳಿಂದ ಬಂದ್ ಕರೆ, ಪರಿಸ್ಥಿತಿ ಉದ್ವಿಗ್ನ

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ: ಹಿಂದೂಪರ ಸಂಘಟನೆಗಳಿಂದ ಬಂದ್ ಕರೆ, ಪರಿಸ್ಥಿತಿ ಉದ್ವಿಗ್ನ

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಹಾಗೂ ಕಲ್ಲು ತೂರಾಟದ ಘಟನೆ ಹಿನ್ನಲೆಯಲ್ಲಿ, ಸ್ಥಳೀಯ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮದ್ದೂರು ಪಟ್ಟಣದಲ್ಲಿ ಇಂದು ಬಂದ್ ಕರೆ ನೀಡಲಾಗಿದೆ.

ಹಿಂದೂ ಸಂಘಟನೆಗಳ ಈ ಪ್ರತಿಭಟನೆ ಹಿನ್ನೆಲೆಯಲ್ಲಿ, ಜಿಲ್ಲಾ ಆಡಳಿತವು ಕಟ್ಟೆಚ್ಚರದ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದೆ. ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಹೊರಡಿಸಿರುವ ಆದೇಶದಂತೆ, ಇಂದು ಬೆಳಿಗ್ಗೆ ೬ ಗಂಟೆಯಿಂದ ನಾಳೆ ಮಧ್ಯಾಹ್ನ ೧೨ ಗಂಟೆವರೆಗೆ ಮದ್ದೂರು ಪಟ್ಟಣದಾದ್ಯಂತ ಕಲಂ ೧೪೪ (ಪ್ರತಿಬಂಧಕಾಜ್ಞೆ) ಜಾರಿಗೆ ತಂದಿದ್ದಾರೆ.

ಘಟನೆ ಹಿನ್ನೆಲೆ: ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಸಮುದಾಯದವರು ಕಲ್ಲು ತೂರಾಟ ನಡೆಸಿದ್ದು, ಈ ಪರಿಣಾಮವಾಗಿ ಸ್ಥಳದಲ್ಲಿ ಗಲಭೆಯಂತ ಪರಿಸ್ಥಿತಿ ಉಂಟಾಗಿದೆ. ಈ ಘಟನೆಗೆ ಪ್ರತಿಕ್ರಿಯೆಯಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರು ಪಟ್ಟಣದ ಹೂವಿನ ಸರ್ಕಲ್ ಬಳಿ ಮುಸ್ಲಿಂ ಸಮುದಾಯದ ಹಸಿರು ಧ್ವಜ ಹಾರುತ್ತಿದ್ದ ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ತೆರಳಿ, ಧ್ವಜವನ್ನು ಕೆಳಗೆ ಇಳಿಸಿ ಅದರ ಬದಲಿಗೆ ಕೇಸರಿ ಧ್ವಜ ಹಾರಿಸಿದ್ದಾರೆ.

ಈ ವೇಳೆ, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದು, ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಭದ್ರತಾ ಕ್ರಮಗಳು: ಮದ್ದೂರಿನಲ್ಲಿ ಸದ್ಯಕ್ಕೆ ಶಾಂತಿ ಸಾದೃಢವಾಗಿದ್ದರೂ, ಜಿಲ್ಲಾಡಳಿತ ಯಾವುದೇ ರೀತಿಯ ಅಹಿತಕರ ಪರಿಸ್ಥಿತಿಯನ್ನು ಅನುಮತಿಸಬಾರದೆಂಬ ದೃಷ್ಟಿಯಿಂದ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದ್ದು, ಡ್ರೋನ್ ನಿಗಾವ್ಯೂಹ ಸಹ ಅನ್ವಯಿಸಲಾಗಿದೆ. ಪ್ರಮುಖ ಚೌಕಗಳು, seಟಿsiಣive ಪ್ರದೇಶಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಕಠಿಣ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

ಸಾಮಾಜಿಕ ಭದ್ರತೆಗೆ ಕರೆ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಶಾಂತಿ ಮತ್ತು ಸಹಿಷ್ಣುತೆಯನ್ನು ಕಾಪಾಡುವಂತೆ ಕರೆ ನೀಡಿದ್ದಾರೆ. “ಧಾರ್ಮಿಕ ಭಾವನೆಗಳನ್ನು ಕೆದಕುವ ಪ್ರಯತ್ನಗಳು ಯಾರಿಂದಾದರೂ ಆಗಿದ್ದರೂ, ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular