ರಾಮನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಯುಜಿಸಿ ಅನುಮೋದಿತ ಹಾಗೂ ನ್ಯಾಕ್ ಎ+ ಮಾನ್ಯತೆಯೊಂದಿಗೆ ವಿವಿಧ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ನಾತಕ/ಸ್ನಾತಕೋತ್ತರ ಪದವಿಗಳಾದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ, ಬಿ.ಲಿಬ್.ಐ.ಎ.ಸ್ಸಿ., ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ., ಎಂ.ಎಸ್. ಡಬ್ಲ್ಯೂ, ಎಂ.ಲಿಬ್.ಐ.ಎಸ್.ಸಿ., ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳಿಗೆ ಪ್ರವೇಶಾತಿಯು ಈಗಾಗಲೇ ಪ್ರಾರಂಭವಾಗಿದ್ದು, ಅಕ್ಟೋಬರ್ 15 ಅಂತಿಮ ದಿನಾಂಕವಾಗಿರುತ್ತದೆ.
ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕರಾಮುವಿಯ ಅಧಿಕೃತ ವೆಬ್‌ಸೈಟ್ www.ksoumysuru.ac.in ನಲ್ಲಿ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ ಮುಖಾಂತರ ಪ್ರವೇಶಾತಿ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿರುತ್ತದೆ.
ಆಯಾ ಶಿಕ್ಷಣಕ್ರಮಗಳಿಗೆ ವಿಶ್ವವಿದ್ಯಾನಿಲಯವು ಪ್ರವೇಶಾತಿ ಶುಲ್ಕವನ್ನು ನಿಗದಿಪಡಿಸಿದ್ದು, ವಿವರವನ್ನು ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಮಾತ್ರ ಆನ್‌ಲೈನ್‌ನಲ್ಲಿ ಪಾವತಿಸಲು ಸೂಚಿಸಲಾಗಿದೆ. ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಯಾರಿಗೂ ಪಾವತಿಸುವಂತಿಲ್ಲ. ಆದಾಗ್ಯೂ ವಿದ್ಯಾರ್ಥಿಗಳು/ಪೋಷಕರು ಯಾವುದೇ ಹೆಚ್ಚುವರಿ ಶುಲ್ಕ ನೀಡಿದಲ್ಲಿ ವಿವಿ ನಿಲಯವು ಅದಕ್ಕೆ ಜವಾಬ್ದಾರರಾಗಿರುವುದಿಲ್ಲ.
ಬಿ.ಎಡ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆ.21 ಅಂತಿಮ ದಿನಾಂಕವಾಗಿದ್ದು, ಸಿಇಟಿ ಪ್ರವೇಶ ಪರೀಕ್ಷೆಯನ್ನು ವಿವಿಯು ನಿಗದಿಪಡಿಸುವ ಕೇಂದ್ರಗಳಲ್ಲಿ ಸೆ.28ರ ಭಾನುವಾರದಂದು ನಡೆಸಲಾಗುವುದು.
ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಎಕ್ಸ್ ಸರ್ವಿಸ್‌ಮನ್ ವಿದ್ಯಾರ್ಥಿಗಳಿಗೆ, ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮತ್ತು ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಯಲ್ಲಿನ ನೌಕರರುಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 10% ರಷ್ಟು ರಿಯಾಯಿತಿ ಇರುತ್ತದೆ (ಯುಜಿ, ಪಿಜಿ ಡಿಗ್ರಿ ಪ್ರೋಗ್ರಾಂ ಮಾತ್ರ)
ಕೋವಿಡ್-2019 ಸಾಂಕ್ರಾಮಿಕ ರೋಗದಿಂದ ಮೃತರಾದ ಆ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರವೇಶ ಬಯಸುವ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ.
ಶೇ.50 ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಎಡ್ ಮತ್ತು ಎಂಬಿಎ ಕಾರ್ಯಕ್ರಮಗಳಿಗೆ ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ತೃತೀಯ ಲಿಂಗ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ SSP ಮುಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ, ನಂ103, “ಇ” ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ದೂ.ಸಂಖ್ಯೆ: 9448668880, 8861732487, 8618501602, 9743184848 ಹಾಗೂ 9900356226ಅನ್ನು ಸಂಪರ್ಕಿಸುವಂತೆ ಪ್ರಾದೇಶಿಕ ನಿರ್ದೇಶಕ ಗಿರೀಶ ಹೆಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.