Tuesday, September 9, 2025
Google search engine

Homeಸ್ಥಳೀಯಮೈಸೂರಿನಲ್ಲಿ ಪ್ರಥಮ ಬಾರಿಗೆ ಪೆಲ್ವಿಕ್ ಹೆಲ್ತ್‌ ಕ್ಲಿನಿಕ್ ಉದ್ಘಾಟನೆ

ಮೈಸೂರಿನಲ್ಲಿ ಪ್ರಥಮ ಬಾರಿಗೆ ಪೆಲ್ವಿಕ್ ಹೆಲ್ತ್‌ ಕ್ಲಿನಿಕ್ ಉದ್ಘಾಟನೆ

ಮೈಸೂರು: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಪೆಲ್ವಿಕ್ ಹೆಲ್ತ್‌ಕ್ಲಿನಿಕ್ ಅನ್ನುಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿಗಳಾದ ಡಾ.ಸಿ.ಜಿ.ಬೆಟಸೂರ ಮಠರವರು ಉದ್ಘಾಟಿಸಿದರು.

ಇವರು ಮಾತನಾಡುತ್ತ ಪುರುಷರು ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿಕಂಡುಬರುವ ಪೆಲ್ವಿಕ್ ಫ್ಲೋರ್ ಸಮಸ್ಯೆಗಳಿಗೆ ಅಂದರೆ ಮಹಿಳೆಯರಲ್ಲಿ ಗರ್ಭಧಾರಣೆ, ಹೆರಿಗೆ ಸಮಯದಲ್ಲಿ ಈ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬರುತ್ತದೆಹಾಗೂ ಪುರುಷರಲ್ಲಿ ವಯಸ್ಸಾದ ಮೇಲೆ ಅಥವಾ ಫ್ರೋಸ್ಟೇಟ್ ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯ ಕೆಳಭಾಗದಲ್ಲಿರುವ ಸ್ನಾಯುಗಳ ದುರ್ಬಲತೆಯಿಂದಕಂಡುಬರುವ ನೋವಿಗೆ ಫಿಜಿಯೋಥೆರಪಿ ಮೂಲಕ ಚಿಕಿತ್ಸೆ ನೀಡುವ ವಿಧಾನವಾಗಿದೆಎಂದರು ಹಾಗೂ ಜೆಎಸ್‌ಎಸ್‌ಆಸ್ಪತ್ರೆಯಲ್ಲಿಅತ್ಯುತ್ತಮ ವೈದ್ಯರುಗಳತಂಡವಿದ್ದುಉತ್ತಮಚಿಕಿತ್ಸೆಯನ್ನು ಸಾರ್ವಜನಿಕರು ಪಡೆಯಬಹುದುಎಂದು ತಿಳಿಸಿದರು.

ಕಾರ್ಯಕ್ರಮಕ್ಕೆಗೌರವ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರಾದಶ್ರೀ ಆರ್ ಮಹೇಶ್‌ರವರು ಮಾತನಾಡುತ್ತ ಈ ದಿನ ವಿಶ್ವಫಿಜಿಯೋಥೆರಪಿ ದಿನಾಚರಣೆಇದೇ ದಿನ ವಿಶೇಷವಾಗಿ ಜೆಎಸ್‌ಎಸ್‌ಆಸ್ಪತ್ರೆಯಲ್ಲಿ ಪೆಲ್ವಿಕ್ ಹೆಲ್ತ್‌ಕ್ಲಿನಿಕ್ ಪ್ರಾರಂಭವಾಗಿದ್ದುಇದುಫಿಜಿಯೋಥೆರಪಿ ವಿಭಾಗದ ಜೊತೆಗೆಯುರಾಲಜಿ, ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ರೇಡಿಯಾಲಜಿ ವಿಭಾಗದಸಹಭಾಗಿತ್ವದಲ್ಲಿ ನಡೆಯುವ ವಿಶೇಷ ಕ್ಲಿನಿಕ್‌ಆಗಿದೆ ಸ್ನಾಯುಗಳ ದೌರ್ಬಲ್ಯದಿಂದಅನಿಯಂತ್ರಿತಮಲ ಮತ್ತುಮೂತ್ರ ವಿಸರ್ಜನೆಗೆ ಫಿಜಿಯೋಥೆರಪಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆಎಂದರು.

ಗೌರವ ಅತಿಥಿಗಳಾಗಿ ಆಗಮಿಸಿದ್ದ ಜೆಎಸ್‌ಎಸ್‌ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಪಿ.ಮಧುರವರು ಮಾತನಾಡಿ ಪೆಲ್ವಿಕ್ ಫ್ಲೋರ್‌ರಿಹ್ಯಾಬಿಲಿಟೇ?ನ್(Pಈಖ) ಎಂಬ ಚಿಕಿತ್ಸೆಯನ್ನು ಪರಿಚಯಿಸಲಾಗಿದೆ.ಇದು ಪುರು?ರು ಮತ್ತು ಮಹಿಳೆಯರಲ್ಲಿ ಕಂಡುಬರುವ ವಿವಿಧ ಮೂತ್ರಜನಕಾಂಗ ಮತ್ತುಅನಿಯಂತ್ರಿತ ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದಚಿಕಿತ್ಸೆಯನ್ನು ನೀಡುತ್ತದೆ.ಪೆಲ್ವಿಕ್ ಫ್ಲೋರ್‌ಡಿಸ್ಫಂಕ್ಷನ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದರೆಉತ್ತಮ ಫಲಿತಾಂಶಗಳನ್ನು ಪಡೆಯಬಹುದುಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಯುರಾಲಜಿವಿಭಾಗದ ಮುಖ್ಯಸ್ಥ ಡಾ.ಅಮೃತ್‌ರಾಜ್‌ಗೌಡ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಮುಖ್ಯಸ್ಥ ಡಾ.ಮಮತಾ ಎಸ್,ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಸುಧಾಕಿರಣ್‌ದಾಸ್ ಮತ್ತು ಫಿಜಿಯೋಥೆರಪಿ ವಿಭಾಗದ ಮುಖ್ಯಸ್ಥರಾದಡಾ.ವಿಜಯ್‌ಸ್ಯಾಮ್ಯುಯೆಲ್‌ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular