ಮೈಸೂರು : ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಅನುಭವ ಟ್ಯುಟೋರಿಯಲ್ಸ್ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಶಂಕರಮಠ ರಸ್ತೆಯಲ್ಲಿರುವ ಖಿಲ್ಲೆ ಮೊಹಲ್ಲಾ ಶ್ರೀಕಾಂತ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ʼಶಿಕ್ಷಕಸೇವಾರತ್ನʼ ʼಉತ್ತಮ ಸೇವಾ ರತ್ನʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಲುಕೋಟೆ ವೆಂಗಿಪುರಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಉದ್ಘಾಟನೆಯನ್ನು ನೆರವೇರಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಎಸ್. ಪ್ರಭುಸ್ವಾಮಿ ಅಭಿನಂದನಾ ನುಡಿಗಳನ್ನಾಡಿದರು. ನಿವೃತ್ತ ಶಿಕ್ಷಕರುಗಳಾದ ಸಂಗಪ್ಪ, ಎಂ.ಮುತ್ತುಸ್ವಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶಿಕ್ಷಕರುಗಳಾದ ವಿ.ಸುಬ್ಬಲಕ್ಷ್ಮಿ, ಜಿ.ಗಾಯತ್ರಿ, ಎನ್.ವಿ.ಲಕ್ಷ್ಮಿ, ಎ.ಆರ್.ಪ್ರಮೀಳ, ಎಂ.ಶಿವಕುಮಾರ್, ಶ್ರೀಕಂಠಶಾಸ್ತ್ರೀ ಬಡ್ತಿ, ಎ.ಎಂ ಭಾಗ್ಯಮ್ಮ, ಎನ್.ನಾಗರಾಜು, ಬೀರೇಗೌಡ ಇವರುಗಳಿಗೆ ಶಿಕ್ಷಕ ಸೇವಾ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.
ಅಡುಗೆ ಸಹಾಯಕಿ ಎಂ.ನಾಗರತ್ನಮ್ಮ ಅವರಿಗೆ ಉತ್ತಮ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಅನುಭವ ಟ್ಯುಟೋರಿಯಲ್ಸ್ ನ ಶಿಕ್ಷಕ ವಿ.ನಾರಾಯಣ್ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.