Tuesday, November 4, 2025
Google search engine

Homeರಾಜ್ಯಸುದ್ದಿಜಾಲನಂಜನಗೂಡಿನಲ್ಲಿ ಶಿವಶರಣೆ ಸತ್ಯಕ್ಕ ರವರ ಜಯಂತಿ ಆಚರಣೆ

ನಂಜನಗೂಡಿನಲ್ಲಿ ಶಿವಶರಣೆ ಸತ್ಯಕ್ಕ ರವರ ಜಯಂತಿ ಆಚರಣೆ

ನಂಜನಗೂಡು: ನಗರದ ರಾಜಾಜಿ ಕಾಲೋನಿಯಲ್ಲಿ ಶರಣರ ಸಂಘಗಳ ಒಕ್ಕೂಟ ಹಾಗು ಆದಿ ದ್ರಾವಿಡ ಪೌರಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ದಲ್ಲಿ 12ನೇ ಶತಮಾನದ ಶಿವಶರಣೆ ಸತ್ಯಕ್ಕರವರ ಜಯಂತಿಯನ್ನು ಆಚರಣೆ ಮಾಡಲಾಯಿತು.

ನಗರಸಭಾ ಸದಸ್ಯ ಪಿ ದೇವು ಶಿವ ಶರಣೆ ಸತ್ಯಕ್ಕ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬಳಿಕ ಮಾತನಾಡುತ್ತ, 12ನೇ ಶತಮಾನದಲ್ಲಿ ಶ್ರೀ ಬಸವಣ್ಣರವರ ಅನುಭವ ಮಂಟಪದಲ್ಲಿ ಪೌರಕಾರ್ಮಿಕರಾಗಿ ಕಾಯಕವನ್ನು ಮಾಡುತ್ತಿದ್ದರು, ಇವರು ಆದಿ ದ್ರಾವಿಡ ಪೌರಕಾರ್ಮಿಕರ ಜನಾಂಗದವರಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ಮೊದಲನೇ ಬಾರಿಗೆ ನಂಜನಗೂಡಿನಲ್ಲಿ ಜಯಂತಿಯನ್ನು ಇಂದು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಲು ಸಿದ್ಧತೆ ನಡೆಸುತ್ತೇವೆ ಎಂದರು.

ಬಳಿಕ ಶರಣೆ ಸತ್ಯಕ್ಕರನ್ನು ಪರಿಚಯಿಸಿ ಹಾಗು ಜಯಂತಿ ಆಚರಣೆಗೇ ಜಾಗೃತಿ ಮೂಡಿಸಿದ ಶರಣ ಸಂಘಗಳ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ ಮಾತನಾಡಿ, ಶ್ರೀ ಬಸವಣ್ಣರವರ ಅನುಭವ ಮಂಟಪದಲ್ಲಿ 770 ಶರಣರು ಇದ್ದರು. ಇವರಲ್ಲಿ ಶಿವಶರಣೆ ಸತ್ಯಕ್ಕರವರು ಒಬ್ಬರಾಗಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಹಿರೇ ಜಂಬೂರುನಲ್ಲಿ ಜನಿಸಿದ ಕಾರಣ ಸ್ಮರಣಾರ್ಥವಾಗಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕಲ್ಯಾಣದಲ್ಲಿ ಸ್ವಚ್ಛತಾ ಕಾಯಕವನ್ನ ಮಾಡಿಕೊಂಡು 27 ವಚನಗಳನ್ನು ರಚನೆ ಮಾಡಿದ್ದಾರೆ.257 ವಚನಕಾರರಲ್ಲಿ ಇವರು ಕೂಡ ಪ್ರಸಿದ್ಧಿ ಪಡೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಸವ ಯೋಗೇಶ, ಹೊರಳವಾಡಿಯ ಕಾರ್ಮಿಕ ಗುತ್ತಿಗೆದಾರರಾದ ಮಹೇಶ, ಮುದ್ದಹಳ್ಳಿ ಅಶೋಕ, ಕೆರೆಹುಂಡಿ ನಂಜುಂಡಸ್ವಾಮಿ, ಮತ್ತು ರಾಜಾಜಿ ಕಾಲೋನಿ ಯಜಮಾನರಾದ ಶಿವಣ್ಣ, ಮಹದೇವ್, ರಂಗ ರಾಜೇಶ್ ಮಂಜುನಾಥ್ ಮಲ್ಲೇಶ್ ನರಸಿಂಹ ಗೋಳೂರು ಸ್ನೇಕ್ ಬಸವರಾಜು ಸೇರಿದಂತೆ ರಾಜಾಜಿ ಕಾಲೋನಿಯ ನಿವಾಸಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular