ಮೈಸೂರು : ವಿ.ವಿ.ಮೊಹಲ್ಲಾ ವಿಭಾಗ ವ್ಯಾಪ್ತಿಯ 66/11 ಕೆ.ವಿ.ಕೆ.ಎಚ್.ಬಿ ಮತ್ತು 66/11 ಕೆ.ವಿ.ದೂರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ನಾಳೆ ಸೆ.12ರ ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
66/11 ಕೆ.ವಿ.ಕೆ.ಎಚ್.ಬಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಪ್ರದೇಶಗಳು, ವಿಜಯ ನಗರ 4ನೇ ಹಂತ, ಕೆ.ಎಚ್.ಬಿ ಕಾಲೋನಿ, ಹೂಟಗಳ್ಳಿ ಗ್ರಾಮ, ಬೆಳವಾಡಿ ಗ್ರಾಮ, ಬಸವನಪುರ, ಮರಟಿಕ್ಯಾತನಹಳ್ಳಿ ಗೇಟ್ ಸುತ್ತಮುತ್ತ, ಕೆ.ಹೆಮ್ಮನಹಳ್ಳಿ, ಲಿಂಗದೇವರಕೊಪ್ಪಲು, ಹೂಟಗಳ್ಳಿ, ಕೆಆರ್ ಎಸ್ ರಸ್ತೆ, ಆದಿತ್ಯಾ ಬಡಾವಣೆ, ಎಸ್.ಆರ್.ಎಸ್ ರಸ್ತೆ, ಆದಿತ್ಯಾ ಬಡಾವಣೆ, ಎಸ್.ಆರ್ .ಎಸ್ ಕಾಲೋನಿ, ಎನ್.ಎಚ್.ಬಿ.ಕಾಲೋನಿ, ಬೆಳವಾಡಿ ಕೈಗಾರಿಕಾ ಪ್ರದೇಶ, ಶಾಹಿ ಗಾರ್ಮೆಂಟ್ಸ್, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಗ್ರ್ಯಾಂಡ್ ಮೌರ್ಯ ಹೋಟೆಲ್, ರಿಲಾಯನ್ಸ್, ಮಾಸ್ ಫರ್ನಿಚರ್ಸ್, ಯಶಸ್ವಿನಿ ಕಲ್ಯಾಣ ಮಂಟಪ, ಸೌಪರ್ಣಿಕ ಅಪಾರ್ಟ್ ಮೆಂಟ್ ಹಿನಕಲ್, ಎಸ್.ವಿ.ಇ.ಐ ಕಾಲೇಜು ಸುತ್ತಮುತ್ತ, ಜಟ್ಟಿಹುಂಡಿ, ಕೆ.ಹೆಮ್ಮನಹಳ್ಳಿ, ಗೊಹಳ್ಳಿ, ಸಾಹುಕಾರ ಹುಂಡಿ, ಮಾದಗಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, 66/11 ಕೆ.ವಿ. ದೂರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಾದ ಟಿ.ಕಾಟೂರು, ಮಾರ್ಬಳ್ಳಿಹುಂಡಿ, ಅರಸಿನಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.