Thursday, September 11, 2025
Google search engine

Homeಸಿನಿಮಾಎಸ್. ನಾರಾಯಣ ವಿರುದ್ಧ ದೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಎಸ್. ನಾರಾಯಣ ವಿರುದ್ಧ ದೂರು: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಎಸ್ ನಾರಾಯಣ ಮತ್ತು ಕುಟುಂಬದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಅಡಿ ಇದೀಗ ಕೇಸ್ ದಾಖಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಾವ ನಾರಾಯಣ, ಅತ್ತೆ ಭಾಗ್ಯವತಿ, ಪತಿ ಪವನ್ ವಿರುದ್ಧ ಸೊಸೆ ಪವಿತ್ರ ಬೆಂಗಳೂರಿನ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. 2021 ರಲ್ಲಿ ಎಸ್ ನಾರಾಯಣ ಪುತ್ರ ಪವನ್ ಹಾಗೂ ಪವಿತ್ರ ಮದುವೆ ನಡೆದಿತ್ತು. ಮದುವೆಯಲ್ಲಿ ವರದಕ್ಷಿಣೆ ಕೊಟ್ಟರು ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆಯಲ್ಲಿ ಒಂದು ಲಕ್ಷ ಮೌಲ್ಯದ ಉಂಗುರ ಮದುವೆ ಖರ್ಚು ಮಾಡಿದ್ದರು ಕೆಲಸ ಇಲ್ಲದೆ ಎಸ್ ನಾರಾಯಣ ಪುತ್ರ ಪವನ್ ಮನೆಯಲ್ಲಿಯೇ ಇದ್ದ ಎಂದು ಆರೋಪಿಸಲಾಗಿದೆ.

ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ನಾನೇ ಮನೆಯನ್ನು ನಡೆಸುತ್ತಿದ್ದೆ. ಕೆಲಸ ಮಾಡಿ ಪವನ ಪತ್ನಿ ಪವಿತ್ರ ಮನೆ ನಡೆಸುತ್ತಿದ್ದರು. ಈ ವೇಳೆ ತಾಯ ಒಡೆವೇಯನ್ನು ಅಡವಿಟ್ಟು ಪವಿತ್ರ ಹಣ ಕೊಟ್ಟಿದ್ದಾರೆ. ಆದರೆ ಕಲಾ ಸಾಮ್ರಾಟ ಟೀಂ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಗಿತ್ತು. ಬಳಿಕ 10 ಲಕ್ಷ ರೂಪಾಯಿ ಸಾಲ ಮಾಡಿ ಪತ್ನಿ ಪವಿತ್ರ ಪತಿಗೆ ನೀಡಿದ್ದಾರೆ ಆದರೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular