- ಶಿಕ್ಷಕ ವೃತ್ತಿ ಪವಿತ್ರ ಮತ್ತು ಶ್ರೇಷ್ಠ: ರಾಜೇಗೌಡ ಪಿರಿಯಾಪಟ್ಟಣದಲ್ಲಿ ರೋಟರಿ ಸಂಸ್ಥೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಪಿರಿಯಾಪಟ್ಟಣ: ಸಮಾಜದ ಎಲ್ಲಾ ಹುದ್ದೆಗಳನ್ನು ಸೃಷ್ಟಿಸುವ ಶಿಕ್ಷಕರ ವೃತ್ತಿ ಪವಿತ್ರವಾದದ್ದು ಎಂದು ರೋಟರಿ ಜಿಲ್ಲೆ 3181 ವಲಯ 6 ರ ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಮಿಡ್ ಟೌನ್ ಕಚೇರಿಯಲ್ಲಿ ಸಂಸ್ಥೆ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ 7 ಮಂದಿ ಸಾಧಕ ಶಿಕ್ಷಕರಿಗೆ ಸನ್ಮಾನಿಸಿ ಅವರು ಮಾತನಾಡಿದರು, ಶಿಕ್ಷಕ ವೃತ್ತಿಗೆ ಇತರೆ ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠ ಸ್ಥಾನಮಾನವಿದೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಪಡುವ ಶ್ರಮಕ್ಕೆ ಬೆಲೆ ಕಟ್ಟಲಾಗದು, ಯಾವುದೇ ವ್ಯಕ್ತಿ ಸಮಾಜದ ಉನ್ನತ ಸ್ಥಾನ ಪಡೆದಾಗ ವಿದ್ಯೆ ಕಲಿಸಿದ ಗುರು ಹಾಗೂ ಮಾರ್ಗದರ್ಶಕರನ್ನು ಮರೆಯಬಾರದು ಎಂದರು.
ರೋಟರಿ ಮಿಡ್ ಟೌನ್ ಅಧ್ಯಕ್ಷ ಜಗನ್,ಕಾರ್ಯದರ್ಶಿ ಚೇತನ್, ಹಿರಿಯ ಸದಸ್ಯರಾದ ಅಂಬಲಾರೆ ಬಸವೇಗೌಡ ಮಾತನಾಡಿದರು, ಈ ವೇಳೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕನಕನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಘು, ಬೈಲಕುಪ್ಪೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಂಜುನಾಥ್ ಮತ್ತು ಆವರ್ತಿ ರಾಜೇಶ್ವರಿ ಅನುದಾನಿತ ಪ್ರೌಢಶಾಲೆ 2014ರ ಜಿಲ್ಲಾ ಉತ್ತಮ ವಿಜ್ಞಾನ ಶಿಕ್ಷಕ ಸಿ.ಟಿ ಗುರುದತ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ ದೇವರಾಜ್, ಕಣಗಾಲು ದಿಡ್ಡಿಯಮ್ಮ ವಿದ್ಯಾಸಂಸ್ಥೆ ಸಂಸ್ಥಾಪಕ ಲಕ್ಷ್ಮೇಗೌಡ, ಬೆಣಗಾಲು ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಸ್ವಾಮಿ ಎಂ.ವಿ, ಬೆಟ್ಟದಪುರ ಡಿಟಿಎಂಎನ್ ಸಂಸ್ಥೆ ಪ್ರಾಂಶುಪಾಲ ಸತೀಶ್ ಅವರನ್ನು ಸನ್ಮಾನಿಸಲಾಯಿತು, ಸನ್ಮಾನಿತರೆಲ್ಲರೂ ತಮ್ಮ ಅನಿಸಿಕೆ ಹಂಚಿಕೊಂಡು ಮಾತನಾಡಿ ತಮ್ಮ ಸೇವೆಯನ್ನು ಗುರುತಿಸಿ ಮತ್ತಷ್ಟು ಪ್ರೋತ್ಸಾಹಿಸಿದ ರೋಟರಿ ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಸತ್ಯನಾರಾಯಣ್, ಐಕೆಪಿ ಹೆಗಡೆ, ಡಾ.ಸುನಿಲ್, ನಾಗರಾಜ್, ರವಿಶಂಕರ್, ಎಂ.ಎಂ ರಾಜೇಗೌಡ, ಮಹದೇವಪ್ಪ, ಚಂದ್ರು, ಸತೀಶ್, ಹರೀಶ್, ದೇವರಾಜ್, ಮಧು, ಸುನಿಲ್, ಶ್ರೀಕಾಂತ್, ಸುರೇಶ್, ತಿಲಕ್, ಲಕ್ಷ್ಮಣ್, ಮಂಜುನಾಥ್, ಮಹದೇವ್, ಸಣ್ಣೇಗೌಡ ಮತ್ತಿತರಿದ್ದರು.