Friday, September 12, 2025
Google search engine

Homeರಾಜ್ಯಸುದ್ದಿಜಾಲಬಂಗ್ಲಗುಡ್ಡೆ ಪ್ರಕರಣ: ಸ್ಥಳ ಮಹಜರಿಯಲ್ಲಿ ಮೂವರು ವ್ಯಕ್ತಿಗಳ ಅವಶೇಷಗಳು ಸಿಕ್ಕಿದವು : ಸ್ಫೋಟಕ ಹೇಳಿಕೆ ನೀಡಿದ...

ಬಂಗ್ಲಗುಡ್ಡೆ ಪ್ರಕರಣ: ಸ್ಥಳ ಮಹಜರಿಯಲ್ಲಿ ಮೂವರು ವ್ಯಕ್ತಿಗಳ ಅವಶೇಷಗಳು ಸಿಕ್ಕಿದವು : ಸ್ಫೋಟಕ ಹೇಳಿಕೆ ನೀಡಿದ ವಿಠಲ್ ಗೌಡ

ಮಂಗಳೂರು (ದಕ್ಷಿಣ ಕನ್ನಡ): ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಮೂರು ಮನುಷ್ಯರ ಕಳೆಬರಹಗಳು ಸಿಕ್ಕಿದೆ ಎಂದು ಮೃತ ಸೌಜನ್ಯ ಮಾವ ವಿಠಲ್ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹತ್ತಿರ ಹತ್ತಿರ ಹತ್ತು ಫೀಟ್ ಗಳಲ್ಲೇ ಈ ಅವಶೇಷಗಳು ಸಿಕ್ಕಿದೆ. ಇನ್ನು ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅದ್ರಲ್ಲಿ ಮೇಲ್ನೋಟಕ್ಕೆ ಮಗುವಿನ ಅವಶೇಷಗಳು, ವಾಮಾಚಾರಕ್ಕೆ ಬಳಸುವ ವಸ್ತುಗಳು ಕೂಡಾ ಸಿಕ್ಕಿದೆ ಎಂದ ಅವರು ಹೂತಿಟ್ಟ ಶವಗಳನ್ನು ಕಾಣದ ಹಾಗೇ ಮಾಡಲು ಮಣ್ಣು ತೆಗೆದು ಹಾಕಿದ ಹಾಗೇ ಕಾಣುತ್ತಿತ್ತು ಎಂದರು.
ಕಳೆಬರಹಗಳು ಅಲ್ಲಲ್ಲಿ ಇತ್ತು, ಬುರುಡೆಗಳು ಮಣ್ಣಲ್ಲಿ ಎದ್ದು ಕಾಣ್ತಿತ್ತು ಎಂದವರು ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular