Friday, September 12, 2025
Google search engine

Homeರಾಜ್ಯಸುದ್ದಿಜಾಲದೇವಾಲಯಗಳ ಬೀಗ ಒಡೆದು ಕಳವು: ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು: ಗ್ರಾಮಸ್ಥರಲ್ಲಿ ಆತಂಕ

ದೇವಾಲಯಗಳ ಬೀಗ ಒಡೆದು ಕಳವು: ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು: ಗ್ರಾಮಸ್ಥರಲ್ಲಿ ಆತಂಕ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಎರಡು ಗ್ರಾಮಗಳಲ್ಲಿ ಮೂರು ದೇವಸ್ಥಾನಗಳ ಬೀಗ ಒಡೆದು ಚಿನ್ನಾಭರಣ ಮತ್ತು ಗೋಲುಕದ ಹಣ ಕಳ್ಳತನ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚು ಬೀಳಿಸುವಂತೆ ಮಾಡಿದೆ.

ತಾಲೂಕಿನ ಹನಸಗೋಗೆ ಗ್ರಾಮದಲ್ಲಿನ ಕನ್ನಂಬಾಡಮ್ಮ ದೇವಾಲಯದ ಬೀಗ ಒಡೆದು ದೇವರ ಮೇಲಿದ್ದ 1.5kg ತೂಕದ ದೇವರ ಬೆಳ್ಳಿ ಮುಖವಾಡ, 10 ಗ್ರಾ ಒಂದು ಜೊತೆ ಚಿನ್ನದ ಓಲೆ , 20 ಗ್ರಾಂನ 4 ಚಿನ್ನದ ತಾಳಿ, ಗೋಲುಕದಲ್ಲಿದ 40 ಸಾವಿರ ಹಣನ್ನು ದೋಚಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕರ್ತಾಳು ಗ್ರಾಮದಲ್ಲಿನ ಲಕ್ಷ್ಮಿದೇವಿ ಮತ್ತು ಮಾರಮ್ಮ ದೇವಾಲಯದ ಬೀಗ ಒಡೆದು ಗೋಲಕದಲ್ಲಿದ್ದ ಹಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಘಟನ ಸ್ಥಳಕ್ಕೆ ಸಾಲಿಗ್ರಾಮ ಠಾಣೆಯ ವೃತ್ತನಿರೀಕ್ಷ ಶಶಿಕುಮಾರ್, ಹನಸೋಗೆ ಉಪ ಠಾಣೆಯ ಉಪಠಾಣಾಧಿಕಾರಿ ರಮೇಶ್, ಸಾಲಿಗ್ರಾಮ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಬಸವರಾಜು, ಗೋವಿಂದರಾಜು, ಜಿಲ್ಲಾ ವಿಶೇಷ ದಳದ ರಾಘವೇಂದ್ರ ಮತ್ತು ಶ್ವಾನದಳದ ಜೊತೆ ಬೆರಳಚ್ಚು ತಜ್ಞರು ಬೇಟಿ ನೀಡಿ ಪರೀಶೀಲನೆ ನಡೆಸಿದರು.

RELATED ARTICLES
- Advertisment -
Google search engine

Most Popular