Saturday, September 13, 2025
Google search engine

Homeರಾಜ್ಯ4.30 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ.ಜಗದೀಶ

4.30 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ.ಜಗದೀಶ

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 4.30 ಕೋಟಿ ಅಂದಾಜು ಮೌಲ್ಯದ ಒಟ್ಟು 3 ಎಕರೆ 0.01 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.

ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸ್ಮಶಾನ, ಕಾಲುದಾರಿ, ಸರ್ಕಾರಿ ಕೆರೆ, ಸರ್ಕಾರಿ ಗುಂಡು ತೋಪು ಮತ್ತು ಸರ್ಕಾರಿ ಗೋಮಾಳ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಆನೇಕಲ್ ತಾಲ್ಲೂಕಿನ: ಕಸಬಾ ಹೋಬಳಿಯ ಕುಂಬಾರನಹಳ್ಳಿ ಗ್ರಾಮದ ಸ.ನಂ. 107 ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.10 ಲಕ್ಷಗಳಾಗಿರುತ್ತದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರಕೆರೆ ಹೋಬಳಿಯ ಪುರದಪಾಳ್ಯ ಗ್ರಾಮದ ಸ.ನಂ. 19/5 ಕಾಲುದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.20 ಲಕ್ಷಗಳಾಗಿರುತ್ತದೆ. ಬೇಗೂರು ಹೋಬಳಿಯ ದೊಡ್ಡನಾಗಮಂಗಲ ಗ್ರಾಮದ ಸ.ನಂ. 54 ರ ಸರ್ಕಾರಿ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 2 ಎಕರೆಗಳಾಗಿದ್ದು ಅಂದಾಜು ಮೌಲ್ಯ ರೂ 3 ಕೋಟೆಗಳಾಗಿರುತ್ತದೆ.

ಬೆಂಗಳೂರು ಉತ್ತರ ತಾಲ್ಲೂಕಿನ: ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸ.ನಂ 23 ರ ಸರ್ಕಾರಿ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.40 ಲಕ್ಷಗಳಾಗಿರುತ್ತದೆ.

ಯಲಹಂಕ ತಾಲ್ಲೂಕಿನ: ಹೆಸರಘಟ್ಟ ಹೋಬಳಿಯ ಅವಿಶ್ವನಾಥಪುರ ಗ್ರಾಮದ ಸ.ನಂ 70 ರ ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ.0.60 ಲಕ್ಷಗಳಾಗಿರುತ್ತದೆ.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾದ ಜಗದೀಶ್ ಕೆ ನಾಯಕ್, ವಿವಿಧ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular