ಬೆಂಗಳೂರು: ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ನ 11ನೇ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಇಂದು ಕರ್ನಾಟಕ ವಿಧಾನಸಭೆಗೆ ಭೇಟಿ ನೀಡಿದರು.

ಸಾಂಪ್ರದಾಯಿಕ ಶೈಲಿಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಓಂ ಬಿರ್ಲಾ ಅವರನ್ನು ಆದರದಿಂದ ಬರಮಾಡಿಕೊಂಡರು. ಆಪಚಾರಿಕ ಸಮಾರಂಭದ ಬಳಿಕ, ಸ್ಪೀಕರ್ ಓಂ ಬಿರ್ಲಾ ಅವರು CPA ಪ್ರಾದೇಶಿಕ ಸಮ್ಮೇಳನದ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿದರು.
ನಂತರ ಅವರು ವಿಧಾನಸೌಧದ ಮೆಟ್ಟಿಲುಗಳನ್ನು ಉದ್ಘಾಟಿಸಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಹಲವಾರು ಹಿರಿಯ ಅಧಿಕಾರಿಗಳೊಂದಿಗೆ ಔಪಚಾರಿಕ ಫೋಟೋ ಸೆಷನ್ನಲ್ಲಿ ಭಾಗವಹಿಸಿದರು. ಈ ವೇಳೆ ವಿಧಾನಸಭೆಯ ಸಂಸದೀಯ ಮಾರ್ಗದರ್ಶಿ ಜ್ಞಾನಶೇಖರ್ ಉಪಸ್ಥಿತರಿದ್ದರು.