Monday, September 15, 2025
Google search engine

Homeಅಪರಾಧನೆಲಮಂಗಲದಲ್ಲಿ 24ನೇ ಮಹಡಿಯಿಂದ ಬಿದ್ದು ಯುವಕ ಆತ್ಮಹತ್ಯೆ

ನೆಲಮಂಗಲದಲ್ಲಿ 24ನೇ ಮಹಡಿಯಿಂದ ಬಿದ್ದು ಯುವಕ ಆತ್ಮಹತ್ಯೆ

ನೆಲಮಂಗಲ: ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರಲ್ಲಿ 24ನೇ ಮಹಡಿಯಿಂದ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯವೊಂದರಲ್ಲಿ ಈ ದೃಶ್ಯ ಸೆರೆಯಾಗಿದೆ. ಅಲಸೂರು ಮೂಲದ ಲೋಕೇಶ್ ಪವನ್ ಕೃಷ್ಣ (26) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮೃತನ ಅಕ್ಕ ಹಾಗೂ ಭಾವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾವ ಕೆಲಸದ ಕಾರಣದಿಂದ ಹೊರಗೆ ಹೋದರೆ, ಗರ್ಭಿಣಿ ಅಕ್ಕ ತವರು ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಲೋಕೇಶ್ ಅಕ್ಕನ ಮನೆಯ ಕೀ ತೆಗೆದುಕೊಂಡು ಬಂದು ಎರಡು ದಿನ ಮನೆದಲ್ಲಿದ್ದು, ಶನಿವಾರ ಬೆಳಗಿನ ಜಾವ 3:30ರ ಸುಮಾರಿಗೆ ಜಿಗಿದುಕೊಂಡಿದ್ದಾರೆ.

ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಿದ್ದು, ಮಾದನಾಯಕನಹಳ್ಳಿ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.

RELATED ARTICLES
- Advertisment -
Google search engine

Most Popular