Monday, September 15, 2025
Google search engine

Homeರಾಜ್ಯಸುದ್ದಿಜಾಲರೇಣುಕಾಸ್ವಾಮಿ ಪತ್ನಿ ಸಹನಾಗೆ ಉದ್ಯೋಗ ಭರವಸೆ: ಶಾಸಕರಿಂದ ಸಹಾನೆಗೆ ಸಿಹಿ ಸುದ್ದಿ

ರೇಣುಕಾಸ್ವಾಮಿ ಪತ್ನಿ ಸಹನಾಗೆ ಉದ್ಯೋಗ ಭರವಸೆ: ಶಾಸಕರಿಂದ ಸಹಾನೆಗೆ ಸಿಹಿ ಸುದ್ದಿ

ವರದಿ: ಸ್ಟೀಫನ್ ಜೇಮ್ಸ್

ಚಿತ್ರದುರ್ಗ: ರೇಣುಕಾಸ್ವಾಮಿ ಸಾವಿನಿಂದ, ಕುಟುಂಬಸ್ಥರು ಕಂಗಾಲಾಗಿದ್ದಾರೆ. ಪತ್ನಿ ಸಹನಾಗೆ ಗಂಡು ಮಗುವಾಗಿದ್ದು, ಭವಿಷ್ಯದ ಚಿಂತೆ ಕಾಡ್ತಿದೆ. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ ನೀಡುವಂತೆ, ಸರ್ಕಾರಕ್ಕೆ ಪದೇ ಪದೇ ಮನವಿ ಮಾಡ್ತಿದ್ರು. ಇದೀಗ ರೇಣುಕಾಸ್ವಾಮಿ ಪತ್ನಿಗೆ, ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನು, ಚಳ್ಳಕೆರೆ ಶಾಸಕ ರಘುಮೂರ್ತಿ ನೀಡಿದ್ದಾರೆ. ಮಠಗಳಲ್ಲಿ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

2024ರ ಜೂನ್‌8ರಂದು ರೇಣುಕಾಸ್ವಾಮಿಯನ್ನು ಅಪಹರಿಸಿ, ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಗಂಭೀರವಾಗಿ ಹಲ್ಲೆ ಮಾಡಿದ್ರು. ಪರಿಣಾಮ, ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ಪವಿತ್ರಾ ಗೌಡ, ದರ್ಶನ್‌ ಸೇರಿ 17 ಮಂದಿಯನ್ನು ಬಂಧಿಸಲಾಗಿದ್ದು, ಆರೋಪಿಗಳು ಜಿಲ್ಲೆಯ ಬೇರೆ ಬೇರೆ ಜೈಲುಗಳಲ್ಲಿ ಇದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆಯಾಗಿ 15 ತಿಂಗಳ ಬಳಿಕ, ರೇಣುಕಾಸ್ವಾಮಿ ಕುಟುಂಬಕ್ಕೆ, ಸಿಹಿ ಸುದ್ದಿ ಸಿಕ್ಕಿದೆ.

ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿರುವ ಶಾಸಕ ರಘುಮೂರ್ತಿ, 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. ಇದೇ ವೇಳೆ ಸಹನಾಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ. ಮುರುಘಾ ಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ್​ ಅವರಿಗೆ ಕರೆ ಮಾಡಿ, ಮಠದ ಸಂಸ್ಥೆಯಲ್ಲಿ ಕೆಲಸ ನೀಡಲು ಮನವಿ ಮಾಡಿದ್ದಾರೆ. ಸರ್ಕಾರಿ ಅನುದಾನಿತ ಸಂಸ್ಥೆಯಲ್ಲಾದ್ರೂ, ಕ್ಲರ್ಕ್ ಪೋಸ್ಟ್ ಕೊಡಿಸೋದಾಗಿ ಭರವಸೆ ಕೊಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular