ಚಾಮರಾಜನಗರ: ಕನ್ನಡ ಚಳುವಳಿಗೊಬ್ಬರೇ ವಾಟಾಳ್ ನಾಗರಾಜ್. ಕನ್ನಡ , ಕನ್ನಡಿಗ, ಕರ್ನಾಟಕ ಕ್ಕಾಗಿ ಅಪರೂಪದ ವಿಶ್ವ ದಾಖಲೆಯ ಹೋರಾಟ ರೂಪಿಸಿರುವ ವ್ಯಕ್ತಿ. ಕನ್ನಡ ಚಳುವಳಿ ಎಂದರೆ ವಾಟಾಳ್ ನಾಗರಾಜ್ ಆಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಸ್ಕೃತಿ ಚಿಂತಕರವಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿ ಕೊಂಡಿದ್ದ ಕನ್ನಡ ಚಳುವಳಿ. ವಾಟಾಳ್ ಕೊಡುಗೆ ಕುರಿತು ಮಾತನಾಡುತ್ತಾ ಕನ್ನಡ ಚಳುವಳಿಯ ಹೋರಾಟದಲ್ಲಿ ಮೊಟ್ಟಮೊದಲ ಬಾರಿಗೆ ಪೊಲೀಸರಿಂದ ಬೂಟಿನ ಏಟು ತಿಂದ ಸೆಪ್ಟೆಂಬರ್ 7ನೇ ದಿನ ವಾಟಾಳ್ ನಾಗರಾಜ್ ರವರ ಹುಟ್ಟುಹಬ್ಬವಾಗಿದೆ. ಕನ್ನಡಕ್ಕಾಗಿ ಏಟು ತಿಂದ ದಿನವನ್ನು ವಿನೂತನವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಮೂಲಕ ಭಾಷೆಯ ಉಳಿವಿಗಾಗಿ ಅವರ ನೆನಪು ಸದಾ ಕಾಲ ಇರುವಂತೆ ಮಾಡಿದ್ದಾರೆ. ಸುಮಾರು ಆರು ದಶಕಗಳಿಂದ ಕನ್ನಡ ನಾಡು-ನುಡಿ, ಜಲ ,ಭಾಷೆ, ಸಂಸ್ಕೃತಿಯ ಉಳಿವಿಗಾಗಿ ತಮ್ಮದೇ ಆದ ವಿನೂತನ ಹೋರಾಟವನ್ನು ನಡಸಿ ತಮ್ಮ ಚಳುವಳಿಯ ಮೂಲಕವೇ ವಿಶ್ವದ ಗಮನ ಸೆಳೆದ ವಾಟಾಳ್ ನಾಗರಾಜ್ ರವರಿಗೆ ವಾಟಾಳರೇ ಸಾಟಿ. ಶಾಸನ ಸಭೆಯ ಧೀಮಂತ ವ್ಯಕ್ತಿಯಾಗಿ ತಮ್ಮ ಅಪಾರ ಸಂಸದೀಯ ಚಿಂತನೆಯ ಮೂಲಕ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ,ಸದಾ ಕಾಲ ಕನ್ನಡಿಗರ ಹೃದಯದಲ್ಲಿ ನೆಲಸಿದ್ದಾರೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಸಿದ್ದ ಕನ್ನಡ ಹೋರಾಟಗಾರರಾದ ಶ್ರೀನಿವಾಸ್ ಗೌಡ ಮಾತನಾಡಿ ಕರ್ನಾಟಕದಲ್ಲಿ ವಾಟಾಳ್ ರವರಿಗೆ ಸಿಗಬೇಕಾದ ಗೌರವ ರಾಜ್ಯದಲ್ಲಿ ಸಿಕ್ಕಿಲ್ಲ .ಕನ್ನಡಕ್ಕಾಗಿ ಸರ್ವಸ್ವವನ್ನು ಹೋರಾಟದ ಮೂಲಕ ನಾಡಿಗೆ ಸಮರ್ಪಿಸಿರುವ ವಾಟಾಳ್ ನಾಗರಾಜ್ ರವರ ಸಾಧನೆ ಅಪಾರ. ಐದು ಬಾರಿ ಶಾಸಕರಾಗಿ ಒಂದೇ ಒಂದು ದಿನ ಶಾಸಕಾಂಗದ ಸದನಕ್ಕೆ ತಪ್ಪಿಸಿಕೊಳ್ಳದೆ ತಮ್ಮ ಎಲ್ಲಾ ಜ್ಞಾನದ ಚಿಂತನೆಯನ್ನು ಕನ್ನಡಕ್ಕಾಗಿ ಹೋರಾಟವನ್ನು ನಡೆಸಿದ ವಾಟಾಳ್ ನಾಗರಾಜ್ ಅಪರೂಪದ ವ್ಯಕ್ತಿ ಎಂದರು .

ಕನ್ನಡವೆಂದರೆ ಕುವೆಂಪು ರಾಜಕುಮಾರ್ ವಾಟಾಳ್ ನೆನಪು ಸದಾ ಇರುತ್ತದೆ. ಚಾಮರಾಜನಗರದಲ್ಲಿ ಮೂರು ಬಾರಿ ಶಾಸಕರಾಗಿ ಕುಡಿಯುವ ನೀರು ,ಚಾಮರಾಜನಗರ ಜಿಲ್ಲೆಯಾಗಿ ಪರಿವರ್ತನೆ ,ನಗರದ ಜೋಡಿಯ ರಸ್ತೆ ರಚನೆ, ಕೆರೆಗಳ ಅಭಿವೃದ್ಧಿ, ಬಡವರಿಗೆ ನಿವೇಶನ ಹಂಚಿದ ಕಾರ್ಯವನ್ನು ಸದಾ ನೆನಪಿಸಿ ಕೊಳ್ಳಬೇಕು. ಚಾಮರಾಜನಗರದ ಪ್ರತಿ ಮನೆಯಲ್ಲೂ ಕನ್ನಡದ ಹೋರಾಟಗಾರರು ಇರಲು ವಾಟಾಳ್ ನಾಗರಾಜ್ ರವರ ಚಳುವಳಿಯೇ ಸ್ಪೂರ್ತಿಯಾಗಿದೆ. ಕನ್ನಡ ಸಂಘಟನೆಗಳು ಸಮಾಜದ ನಾಡಿನ ಒಳಿತಿಗಾಗಿ ಸದಾ ದುಡಿಯಲು ವಾಟಾಳ್ ಅವರ ಪ್ರೇರಣೆ ಕಾರಣವೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ವಾಟಾಳದ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿರುವುದು ಮೆಚ್ಚುವಂತಹದ್ದು ತಾಲೂಕು ಅಧ್ಯಕ್ಷ ಅವರು ನೂತನ ಕಾರ್ಯಕ್ರಮವನ್ನು ರೂಪಿಸುತ್ತಿರುವುದು ಬಹಳ ಸಂತೋಷಎಂದು ತಿಳಿಸಿದರು.
ಬರಹಗಾರ ಎಸ್ ಲಕ್ಷ್ಮಿನರಸಿಂಹ ವಾಟಾಳ್ ಹೋರಾಟದಿಂದ ಬೆಂಗಳೂರಿನಲ್ಲಿ ಕನ್ನಡ ಉಳಿಯಲು ಕನ್ನಡದ ಸಂಸ್ಕೃತಿ ಪರಂಪರೆ ಬೆಳೆಯಲು ನಾಗರಾಜ್ ರವರ ಹೋರಾಟವೇ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಲಿಂಗ ಮೂರ್ತಿ ,ವರದನಾಯಕ , ರವಿಚಂದ್ರಪ್ರಸಾದ್, ಪಣ್ಯದ ಹುಂಡಿ ರಾಜು ಇದ್ದರು.