ವರದಿ: ಸ್ಟೀಫನ್ ಜೇಮ್ಸ್
ಕುವೆಂಪು, ಡಾ. ರಾಜ್‌ಕುಮಾರ್, ಎಸ್.ನಿಜಲಿಂಗಪ್ಪ, C.N.R ರಾವ್. ದೇವಿಪ್ರಸಾದ್ ಶೆಟ್ಟಿ, ಭೀಮಸೇನ ಜೋಷಿ, ಶ್ರೀ ಶಿವಕುಮಾರ ಸ್ವಾಮೀಜಿ, ದೇ.ಜವರೇಗೌಡ, ವೀರೇಂದ್ರ ಹೆಗ್ಗಡೆ ಮತ್ತು ಪುನೀತ್ ರಾಜ್‌ಕುಮಾರ್. ಇದೀಗ ಡಾ.ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಗೌರವ ಸಂದಿದೆ. ಈ ರತ್ನಗಳ ಸಾಲಿಗೆ ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಸೇರಬೇಕು ಎಂದು ಆಗ್ರಹಿಸಲಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ದಿವಂಗತ ಹಿರಿಯ ನಟಿ ಸರೋಜಾ ದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಗೌರವ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಂಬರೀಶ್‌ಗೆ ಕರ್ನಾಟಕ ರತ್ನ ನೀಡಬೇಕು ಅನ್ನೋದು ರೆಬೆಲ್ ಸ್ಟಾರ್ ಅಭಿಮಾನಿಗಳ ಬಹಳ ದಿನಗಳ ಬೇಡಿಕೆ. ಅಂಬರೀಷ್ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್‌ಗೆ ಕುಚಿಕು ಗೆಳೆಯ. ವಿಷ್ಣು ಸಿಕ್ಕಂತೆ ಅವರ ಗೆಳೆಯ ಅಂಬಿಗೂ ಕರ್ನಾಟಕ ರತ್ನ ಸಿಕ್ಕರೆ ಇಡೀ ನಾಡಿಗೆ ಸಂತೋಷವಾಗುತ್ತದೆ. ಹೀಗಾಗಿ ನಟಿ ತಾರಾ ಅವರು ಡಿಕೆ ಶಿವಕುಮಾರ್ ಕೂಡ ಅಂಬಿ ಅವರನ್ನ ತುಂಬಾ ಹತ್ತಿರದಿಂದ ಕಂಡಿದ್ದೀರಾ. ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಹಾಗೂ ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರೋದು ಬಹಳ ಸಂತೋಷದ ಸುದ್ದಿ. ಜೊತೆಗೆ ಅಂಬರೀಶ್‌ಗೂ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಎಂದು ತಾರಾ ಅನುರಾಧ ಮನವಿ ಮಾಡಿಕೊಂಡಿದ್ದಾರೆ.
2021ರಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಲಾಗಿತ್ತು. ಆಗಲೇ ಅಂಬರೀಷ್ ಅವರಿಗೂ ಕರ್ನಾಟಕ ರತ್ನ ನೀಡುವ ಒತ್ತಾಯ ಕೇಳಿ ಬಂದಿತ್ತು. ಅಪ್ಪುಗೆ ಕರ್ನಾಟಕ ರತ್ನ ಕೊಟ್ಟಾಗ ಸುಮಲತಾ ಅಂಬರೀಶ್ ಅವರು ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಕೊಟ್ಟರೆ ಅಂಬಿಗೆ ಕೊಟ್ಟಂತೆ ಎಂದು ಹೇಳಿದ್ದರು. ಇದೀಗ ನಟಿ ತಾರಾ ಅವರು ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದಾರೆ.