ಹುಣಸೂರು: ಕಳೆದ ನಾಲ್ಕು ತಿಂಗಳಿಂದ ಕಾವೇರಿ ನದಿ ತುಂಬಿ ಹರಿಯುತ್ತಿದ್ದರು ಕೆಲವು ಕೆರೆಗಳನ್ನು ಇನ್ನೂ ಸಹ ತುಂಬಿಸದೆ ಕೆ ಆರ್ ನಗರ ವಿಭಾಗದ ಹಾರಂಗಿ ಇಲಾಖೆ ಮತ್ತು ಕಿತ್ತೂರು ಉಪ ವಿಭಾಗದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿರುತ್ತಾರೆ ಎಂದು ಸತ್ಯಪ್ಪ ಆರೋಪಿಸಿದರು.
ಈ ಬಗ್ಗೆ ಸತ್ಯ ಎಮ್ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಹುಣಸೂರಿನ ಗಾವಡಗೆರೆ ಹೋಬಳಿಯ ಜಾಬಗೆರೆ ಕಳ್ಳಿಕೊಪ್ಪಲು, ಚಿಕ್ಕಾಡನಹಳ್ಳಿ, ಕೆರೆಯೂರು ,. ಹುಲ್ಯಾಳು ಕೆರೆಗಳನ್ನು ಇನ್ನು ಸಹ ತುಂಬಿಸಿರುವುದಿಲ್ಲ. ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷವಾಗಿದ್ದು ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೇನು ಮಳೆ ಕಡಿಮೆಯಾಗುತ್ತಾ ಬಂದಿದೆ. ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಇಳಿಮುಖವಾಗುತ್ತ ಇದೆ. ಆದರೆ ಮೇಲ್ಕಂಡ ಕೆರೆಗಳು ನೀರು ತುಂಬುವ ಭಾಗ್ಯ ಕಾಣದೆ ಬರಿದಾಗಿ ನಿಂತಿದ್ದು ರೈತರು ಕಂಗಾಲಾಗುವಂತೆ ಮಾಡಿದೆ.
ಕೆ ಆರ್ ನಗರ ಉಪ ವಿಭಾಗ ಹಾಗೂ ಕಿತ್ತೂರು ಉಪ ವಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ಈ ಕೆರೆಗಳು ತುಂಬಿರುತ್ತಿದ್ದರೆ ವರ್ಷಪೂರ್ತಿ ನೀರಿನ ತೊಂದರೆ ಇರುತ್ತಿರಲಿಲ್ಲ. ಈಗಾಗಲೇ ಸುಮಾರು ಐದರಿಂದ ಆರು ಸಾವಿರ ಬೋರ್ವೆಲ್ ಗಳು ನೀರಿಲ್ಲದೆ ಬತ್ತಿ ಹೋಗಿವೆ. ಜನ ಜಾನುವಾರುಗಳಿಗೂ ಸಹ ನೀರಿನ ಕೊರತೆ ಉಂಟಾಗಲಿದೆ.
ಕೂಡಲೇ ಕೆ. ಆರ್ ನಗರದ ಹಾರಂಗಿ ಇಲಾಖೆಯ ಅಧಿಕಾರಿಗಳು ಹಾಗೂ ಕಿತ್ತೂರು ಉಪವಿಭಾಗದ ಅಧಿಕಾರಿಗಳು ಕೆರೆಗಳನ್ನು ತುಂಬಿಸುವ ಕೆಲಸವನ್ನು ಪ್ರಾರಂಭಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಕಚೇರಿಗಳ ಎದುರು ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.