Thursday, September 18, 2025
Google search engine

Homeಅಪರಾಧಯೋಗ ಗುರು ನಿರಂಜನಾ ಮೂರ್ತಿ ಬಂಧನ: ಲೈಂಗಿಕ ದೌರ್ಜನ್ಯ ಆರೋಪ

ಯೋಗ ಗುರು ನಿರಂಜನಾ ಮೂರ್ತಿ ಬಂಧನ: ಲೈಂಗಿಕ ದೌರ್ಜನ್ಯ ಆರೋಪ

ಬೆಂಗಳೂರು : ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಯೋಗ ಗುರು ನಿರಂಜನಾ ಮೂರ್ತಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ಆರೋಪ ಹಿನ್ನೆಲೆ ರಾಜರಾಜೇಶ್ವರಿ ನಗರ ಪೊಲೀಸರಿಂದ ಯೋಗ ಗುರು ನಿರಂಜನಾ ಮೂರ್ತಿ ಬಂಧನವಾಗಿದೆ. ಕಳೆದ ಅನೇಕ ವರ್ಷಗಳಿಂದ ರಾಜರಾಜೇಶ್ವರಿ ನಗರದಲ್ಲಿ ನಿರಂಜನಾ ಮೂರ್ತಿ ಯೋಗ ಕೇಂದ್ರ ನಡೆಸುತಿದ್ದರು.ಯೋಗ ಸೆಂಟರ್ ಗೆ ಬರ್ತಿದ್ದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪದ ಅಡಿಯಲ್ಲಿ ಬಂಧನವಾಗಿದೆ.

ಹದಿನೇಳು ವರ್ಷದ ಬಾಲಕಿ ಮೇಲೆ ನಿರಂಜನಾ ಮೂರ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಶಿಫಾರಸು ಮಾಡ್ತೇನೆ.ನಿನಗೆ ಸರ್ಕಾರಿ ಕೆಲಸವ ಸಿಗುವಂತೆ ಮಾಡ್ತೀನಿ ಎಂದು ಪುಸಲಾಯಿಸಿ ಖಾಸಗಿ ಅಂಗಗಳನ್ನು ಮುಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಾಳೆ. ಈ ಹಿನ್ನೆಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ನಿರಂಜನಾಮೂರ್ತಿ ಬಂಧನವಾಗಿದೆ. ಕೇಸ್ ದಾಖಲಾಗಿದ್ದ ಬಳಿಕ ಆರೋಪಿ ಯೋಗಗುರು ತಲೆಮರೆಸಿಕೊಂಡಿದ್ದರು.ಸತತವಾಗಿ ಕಾರ್ಯಾಚರಣೆ ನಡೆಸಿ ನಿರಂಜನಾಮೂರ್ತಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

RELATED ARTICLES
- Advertisment -
Google search engine

Most Popular