- ಸುಣ್ಣದಕೇರಿ 5೦ನೇ ವಾರ್ಡ್‌ನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಂದ ಭಾವಚಿತ್ರಕ್ಕೆ ಪುಷ್ಪಾರ್ಚನೆ, ನೆಚ್ಚಿನ ನಟನ ಸ್ಮರಣೆ
ಮೈಸೂರು : ಡಾ.ವಿಷ್ಣುವರ್ಧನ್ ಅವರ ೭೫ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ೫೦ನೇ ವಾರ್ಡ್ ನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಂದ ಪುಷ್ಪಾರ್ಚನೆ ಮಾಡಿ ಸಿಹಿ ವಿತರಿಸದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿಗಳು ಕನ್ನಡ ಚಿತ್ರರಂಗದಲ್ಲಿ ಮಹಾನ್ ಕಲಾವಿದರಲ್ಲಿಒಬ್ಬರಾದ ಅಭಿಮಾನಿಗಳ ಪ್ರೀತಿಯ ಸಾಹಸಸಿಂಹ, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಎಂದಿಗೂ ಮರೆಯದ ವ್ಯಕ್ಯಿತ್ವವನ್ನು ಸಂಪಾದಿಸಿರುವ ವಿಷ್ಣುವರ್ಧನ್ ಅವರ ಕನ್ನಡ ಕಲಾಸೇವೆಗೆ ಎಂದಿಗೂ ಅಜರಾಮರ. ಹಾಗೂ ಇನ್ನೊಂದು ಸಂತಸದ ವಿಷಯವೆಂದರೆ.
ಅವರಿಗೆ ’ಕರ್ನಾಟಕ ರತ್ನ’ ಗೌರವ ಲಭಿಸಿರುವುದು ಅಭಿಮಾನಿಗಳಿ ಸಂತಸ ತಂದಿದೆ ಎಂದರು. ಇದೇ ವೇಳೆಯಲ್ಲಿ ಇಂದು ಸಂಜೆ ಅನ್ನಸಂತರ್ಪಣೆ , ಹಾಗೂ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದರು. ಚಿತ್ರದಲ್ಲಿ ಕುಮಾರ್, ಅಶ್ವತ್, ದಾಸಿ,ಮಹೇಶ್, ಪ್ರಭು, ದೇವರಾಜು, ಪ್ರಕಾಶ್, ರವಿಚಂದ್ರ ಬಸವರಾಜು, ರೇವಣ್ಣ ಉಪಸ್ಥಿತರಿದ್ದರು.