ಮೈಸೂರು : ನಾಡಹಬ್ಬ ದಸರಾ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಈ ನಡುವೆ ಸಾಹಸ ಕ್ರೀಡೆ ಹಾಗೂ ಬೈಕ್ ಸ್ಟಂಟ್ ಈ ಬಾರಿ ರದ್ದಾಗಿದೆ.
ದಸರಾ ಮಹೋತ್ಸವದಲ್ಲಿನ ಟಾರ್ಚ್ ಲೈಟ್ ಪರೇಡ್ ನಲ್ಲಿ ನಡೆಯೋ ಪಾರಂಪರಿಕ ಪ್ರದರ್ಶನವಾದ ಬೈಕ್ ಸ್ಟಂಟ್ ಕ್ಯಾನ್ಸಲ್ ಆಗಿದೆ. ಇದರ ಜೊತೆಗೆ ಜನಪ್ರಿಯ ಪ್ರೋಗ್ರಾಮ್ ಗಳಾದ ಭೂ ಸಾಹಸ, ಜಲ ಸಾಹಸ ಕ್ರೀಡೆಗಳನ್ನೂ ಕೂಡ ಈ ಬಾರಿ ಕೈ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ..
ಕಳೆದ ವರ್ಷ ಪಂಜಿನ ಕವಾಯಿತು ವೇಳೆ ಮಳೆ ಬಂದಿದ್ದರಿಂದ ಬೈಕ್ ಸ್ಟಂಟ್ ಆಯೋಜನೆಗೆ ಎರಡೂವರೆ ಗಂಟೆ ಕಾಯಬೇಕಾಯಿತು. ಈ ಬಾರಿಯೂ ಮಳೆ ಬಂದಲ್ಲಿ ಬೈಕ್ ಸ್ಟಂಟ್ ಆಯೋಜನೆ ಕಷ್ಟವಾಗುತ್ತದೆ. ಹೀಗಾಗಿ ಇದೇ ಕಾರಣವನ್ನು ಮುಂದಿಟ್ಟುಕೊಂಡು ಬೈಕ್ ಸ್ಟಂಟ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಬದಲಾಗಿ 15-20 ನಿಮಿಷಗಳ ಸಂಗೀತ ಕಾರ್ಯಕ್ರಮ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು, ಡಾ. ರಾಜ್‍ಕುಮಾರ್ ಉದ್ಯಾನ ಹಾಗೂ ಹೆಲಿಪ್ಯಾಡ್‍ನಲ್ಲಿ ಆಯೋಜಿಸಲಾಗುತ್ತಿದ್ದ ಭೂ ಸಾಹಸ ಹಾಗೂ ನಗರದ ಹೊರ ವಲಯದ ವರುಣ ಕೆರೆಯಲ್ಲಿ ಆಯೋಜಿಸುತ್ತಿದ್ದ ಜಲ ಸಾಹಸ ಕ್ರೀಡೆಗಳ ಆಯೋಜಿಸಲು ಅನುಮೋದನೆ ದೊರೆತಿಲ್ಲ. ಹೀಗಾಗಿ ಆಸಕ್ತರಿಗೆ ಈ ಬಾರಿ ರೋಮಾಂಚಕಾರಿ ದೃಶ್ಯ ಕಣ್ತುಂಬಿಕೊಳ್ಳೋದು ಮಿಸ್ ಆಗಲಿದೆ.
ಕ್ರೀಡೆಗಳಾದ ಜಿಪ್ ಲೈನ್, ರೋಪ್ ಬಳಸಿಕೊಂಡು ಆಟವಾಡುವ ಕ್ರೀಡೆಗಳು, ಜಲಸಾಹಸ ಕ್ರೀಡೆಗಳಾದ ಜಟ್ ಸ್ವೀ, ಬನಾನ ರೈಡ್, ಕಯಾಕಿಂಗ್, ಬೋಟಿಂಗ್ ನಂತಹ ಕ್ರೀಡೆಗಳನ್ನು ಮೈಸೂರು ಬದಲಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಲು ತೀರ್ಮಾನ ಮಾಡಲಾಗಿದೆ.
ಇನ್ನು, ದಸರೆಯ ಕೊನೆಯ ದಿನ ನಡೆಯೋ ಪಂಜಿನ ಕವಾಯತು ವೇಳೆ ಕ್ರೀಡಾ ಇಲಾಖೆ ವತಿಯಿಂದ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ. ಬೈಂಡ್ ಚೆಸ್, ಸೈಕಲ್ ಪೋಲೊ, ಕರಾಟೆ, ಬಾಡಿ ಬಿಲ್ಡಿಂಗ್, ಹಾಫ್ ಮ್ಯಾರಥಾನ್ ಆಯೋಜಿಸಲು ಅನುಮೋದನೆ ದೊರೆತಿದೆ.