Saturday, September 20, 2025
Google search engine

Homeಅಪರಾಧನಕಲಿ ಆಧಾರ್ ಕಾರ್ಡ್ ಪ್ರಕರಣ: ಹಿಂದೂ ಹೆಸರಿನಲ್ಲಿ ರೂಮ್ ಬುಕಿಂಗ್, ಮುಸ್ಲಿಂ ವ್ಯಕ್ತಿ ಬಂಧನ

ನಕಲಿ ಆಧಾರ್ ಕಾರ್ಡ್ ಪ್ರಕರಣ: ಹಿಂದೂ ಹೆಸರಿನಲ್ಲಿ ರೂಮ್ ಬುಕಿಂಗ್, ಮುಸ್ಲಿಂ ವ್ಯಕ್ತಿ ಬಂಧನ

ಚಿಕ್ಕಮಗಳೂರು:  ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಎಡಿಟ್‌ ಮಾಡಿಕೊಂಡು ಲಾಡ್ಜ್‌ ಒಂದರಲ್ಲಿ ರೂಮ್‌ ಪಡೆದು ಹಿಂದೂ ಮಹಿಳೆಯ ಜೊತೆ ತೆರಳಿ ಸಿಕ್ಕಿಬಿದ್ದ ಘಟನೆ ಕಾಫಿನಾಡು ಚಿಕ್ಕಮಗಳೂರಿನ  ಶೃಂಗೇರಿ ಮಠದ ವಸತಿಗೃಹದಲ್ಲಿ ನಡೆದಿದೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಮಾಗುಂಡಿಯ ಅಬ್ದುಲ್ ಸಮದ್ ಎನ್ನುವಾತ  ಶೃಂಗೇರಿ ಮಠದಲ್ಲಿ ರೂಮ್ ಪಡೆದುಕೊಂಡಿದ್ದ. ಈತ ಆಧಾರ್ ಕಾರ್ಡ್ ನಲ್ಲಿ ರಮೇಶ್ ಎಂದು ಹೆಸರನ್ನು ಎಡಿಟ್ ಮಾಡಿ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡು ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆದುಕೊಂಡಿದ್ದ. ಈ ಬಗ್ಗೆ ಅನುಮಾನ ಬಂದಿದ್ದು ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಸದ್ಯ ಇಬ್ಬರನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಹಿಂದೂ ಮಹಿಳೆ ಹಾಗೂ ಅಬ್ದುಲ್ ಸಮದ್ ಗೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ನಂತರ ಇಬ್ಬರ ಮಧ್ಯೆ ಸ್ನೇಹ ಬೆಳೆದು ಸಂಬಂಧಕ್ಕೆ ತಿರುಗಿದ್ದು, ಸುತ್ತಾಟ ನಡೆಸುತ್ತಿದ್ದರು ಎನ್ನಲಾಗಿದೆ. ನಂತರ ಯಾರಿಗೂ ಅನುಮಾನ ಬಾರದಂತೆ ಅಬ್ದಲ್ ಎನ್ನುವ ಬದಲಿಗೆ ರಮೇಶ್ ಎಂದು ಆಧಾರ್ ಕಾರ್ಡ್ ಮಾಡಿಕೊಂಡು ಮಹಿಳೆಯನ್ನು ಶೃಂಗೇರಿ ಮಠದ ಲಾಡ್ಜ್ ಕರೆದುಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶೃಂಗೇರಿ ಮಠದ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular