ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಕ್ರೈಮ್ ಚಟುವಟಿಕೆಗಳ ತಾಣವಾಗುತ್ತಿದೆ.ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡ ಪತಿಯೊಬ್ಬ ಚಾಕುವಿನಿಂದ ಪತ್ನಿಯ ಕುತ್ತಿಗೆ ಇರಿದಿದ್ದಾನೆ.
ಬೆಂಗಳೂರಿನಲ್ಲಿ ಬ್ಯಾಡರಹಳ್ಳಿಯಲ್ಲಿ ಸೆಪ್ಟೆಂಬರ್ 18ರಂದು ಕೃತ್ಯ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಯುವತಿ ದೇವಿಕಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಾಕು ಇರಿದ ಪತಿಯನ್ನು ಚಂದ್ರು ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
11 ವರ್ಷಗಳ ಹಿಂದೆ ಚಂದ್ರು ಮತ್ತು ದೇವಿಕ ವಿವಾಹವಾಗಿದ್ದರು, ಖಾಸಗಿ ಆಸ್ಪತ್ರೆಯಲ್ಲಿ ಪತ್ನಿ ದೇವಿಕಾ ಕೆಲಸ ಮಾಡುತ್ತಿದ್ದಾಳೆ. ಇತ್ತೀಚೆಗೆ ಆಕೆಯ ವರ್ತನೆ ಬದಲಾಗಿತ್ತು. ಮನೆಗೆ ಚಂದ್ರು ಇಲ್ಲದ ವೇಳೆ ಯಾರೋ ಬರುತ್ತಿದ್ದಾರೆ ಎಂಬ ವಿಚಾರಕ್ಕೆ ಚಂದ್ರು ಪತ್ನಿ ದೇವಿಕಾ ಜೊತೆ ಜಗಳ ತೆಗೆಯುತ್ತಿದ್ದನು. ಕುಡಿತದ ಚಟಕ್ಕೆ ಬಿದ್ದು ಪ್ರತಿದಿನ ಜಗಳ ಮಾಡುತ್ತಿದ್ದನು. ಇದರಿಂದ ಬೇಸತ್ತ ದೇವಿಕಾ ಪತಿಯಿಂದ ಐದು ವರ್ಷಗಳಿಂದ ದೂರವಿದ್ದಳು ಎಂಬ ಮಾಹಿತಿ ಸಿಕ್ಕಿದೆ.
ದೇವಿಕಾಳ ಚಿನ್ನದ ಒಡವೆಯನ್ನು ಪತಿ ಚಂದ್ರು ಅಡವಿಟ್ಟಿದ್ದನು.ಈ ಕುರಿತು ಬ್ಯಾಡರಹಳ್ಳಿ ಠಾಣೆಯಲ್ಲಿ ಪತ್ನಿ ದೇವಿಕ ದೂರು ನೀಡಿದ್ದಳು. ಇದಕ್ಕೆ ಕೋಪಗೊಂಡ ಪತಿ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ.
ಪತ್ನಿ ದೇವಿಕ ದೂರ ಇದ್ದರೂ ಪದೇ ಪದೇ ಪತಿ ಚಂದ್ರು ಹಿಂಸೆ ಕೊಡುತ್ತಿದ್ದ.ನು ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದನು. ಪತ್ನಿಯ ಫೋಟೋಗಳನ್ನು ಅಶ್ಲೀಲವಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಿದ್ದನು. ಹಣದ ವಿಚಾರಕ್ಕೂ ಅನೇಕ ಬಾರಿ ಇಬ್ಬರ ನಡುವೆ ಗಲಾಟೆ ಆಗಿತ್ತು. ದೇವಿಕ ಯಾವ ಮಾತು ಕೆಳದಿದ್ದಾಗ ಚಾಕು ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.