ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ರಾಜ್ಯಕ್ಕೆ ನೀಡ ಬೇಕಿರುವ ವಿವಿಧ ಸಾಲವನ್ನು ತಡೆ ಹಿಡಿದಿರುವ ಪರಿಣಾಮವಾಗಿ ಜಿಲ್ಲಾ ಬ್ಯಾಂಕಿನಿಂದ ರೈತರಿಗೆ ಸಕಾಲಕ್ಕೆ ಸಾಲ ಕೊಡಲಾಗುತ್ತಿಲ್ಲ ಎಂದು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದ ಸಂಘದ 2024-25 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಬ್ಯಾಂಕಿನ ನೂತನ ಆಡಳಿತ ಮಂಡಳಿ ರಚನೆಯಾದ ನಂತರ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಿ ಹೊಸ ಸದಸ್ಯರಿಗೆ ಸಾಲ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಬ್ಯಾಂಕಿನಲ್ಲಿ ಇರುವ ಒಂದು ಸಾವಿರ ಕೋಟಿ ರೂಪಾಯಿಗಳನ್ನ ನಿಚ್ಚಿತ ಠೇವಣಿಗಳನ್ನು ಇನ್ನಷ್ಟು ಹೆಚ್ಚು ಸಂಗ್ರಹಿಸಲು ಕ್ರಮ ಕೈಗೊಳ್ಳುವ ಮೂಲಕ ಬ್ಯಾಂಕಿನ ವ್ಯಾಪ್ತಿಯ ಸಂಘದ ಅಭಿವೃದ್ದಿಗೆ ಮುಂದಾಗುವದರ ಜತಗೆ ತಮ್ಮ ಅವಧಿಯಲ್ಲಿ ಪಕ್ಷಾತೀತವಾಗಿ ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು
ರಾಜ್ಯದಲ್ಲಿ ಇದುವರೆಗೂ 98 ಸಾವಿರ ಕೋಟಿರೂ ಗಳನ್ನು ವಿವಿಧ ಗ್ಯಾರಂಟಿಯೋಜನೆಗೆ ಖರ್ಚು ಮಾಡಲಾಗಿದ್ದು ಎಲ್ಲಾ ಸಮಾಜದವರಿಗೆ ಇದು ಸದುಪಯೋಗವಾಗಿದ್ದು ಕೆ.ಅರ್.ನಗರ ಕ್ಷೇತ್ರದ ಅಭಿವೃದ್ದಿಗೆ ಮುಖ್ಯ ಮಂತ್ರಿಗಳು ಹೆಚ್ಚಿನ ಅನುಧಾನ ನೀಡಿದ್ದು ಅಭಿವೃದ್ದಿ ಪರ್ವ ಆರಂಭ ಅಗಲಿದೆ ಎಂದರು.
ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲ ಕೊಪ್ಪಲು ದಿನೇಶ್ ಮಾತನಾಡಿ ಕುಪ್ಪೆ ಸಹಕಾರ ಸಂಘವು 2025-26 ನೇ ಸಾಲಿನಲ್ಲಿ ರೈತರಿಗೆ 1.31 ಕೋಟಿ ರೂಪಾಯಿ ಕೆ.ಸಿ.ಸಿ.ಬೆಳೆ ಸಾಲ ವಿತರಣೆ ಮಾಡಿ ಪ್ರಸಕ್ತ ಸಾಲಿನಲ್ಲಿ ಸಂಘವು 2.40 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು
ಸಂಘದ ಸಿಇಓ ಜಿ.ಪುನೀತ್ ಮಾತನಾಡಿ 2024-25 ಸಾಲಿನಲ್ಲಿ ನೀಡಿರುವ ಕೆ.ಸಿ.ಸಿ.ಸಾಲವನ್ನು 4.26 ಕೋಟಿ ರೂಪಾಯಿಗಳನ್ನು 2025-26 ನೇ ಸಾಲಿನಲ್ಲಿ 7 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವುದು, ಬೋರವೇಲ್, ಐ.ಪಿ.ಸೆಟ್ ,ಟ್ಯಾಕ್ಟರ್ ಸಾಲವಿತರಣೆಯ ಜತಗೆ ಸುಸ್ತಿ ಸಾಲವನ್ನು ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮುಖಂಡ ಸಿ.ಎಚ್.ಸ್ವಾಮಿ ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಕೆ.ಬಾಲಮನೋಹರ, ಕುಳ್ಳೆಗೌಡ, ಮಾಜಿ ಅಧ್ಯಕ್ಷ ನವೀನ್, ಸಂಘದ ಮಾಜಿ ಅಧ್ಯಕ್ಷ ಡಿ.ರಾಮಕೃಷ್ಣೇಗೌಡ, ಸಿ.ಟಿ.ಪಾರ್ಥ, ಷೇರುದಾರ ರೈತರಾದ ಸಿ.ಎಚ್.ಹುಚ್ಚೆಗೌಡ, ಮಾಸ್ಟರ್ ಹಿರಣ್ಣಯ್ಯ, ತಮ್ಮಯ್ಯ, ಜಯಕುಮಾರ್, ಸುರೇಂದ್ರ, ಕೆ.ಅರ್.ಬಾಲಕೃಷ್ಣ,ಸುಬ್ಬಣ್ಣ, ಮೊದಲಾದವರು ಸಂಘದ ಅಭಿವೃದ್ದಿ, ವಿವಿಧ ಸಾಲವಿತರಣೆ, ವಿವಿಧವಾಗಿ ಮಾಡುವ ಖರ್ಚುಗಳನ್ನ ಕಡಿಮೆ ಮಾಡುವುದು, ಮೃತ ರೈತ ಕುಟುಂಬಕ್ಕೆ ಮರಣ ನಿಧಿ ನೀಡುವುದು, ಸೇರಿದಂತೆ ವಿವಿಧ ವಿಷಯಗಳ ಚರ್ಚೆ ನಡೆಸಿ ಮಾತನಾಡಿದಾಗ ಜಿಲ್ಲಾ ಬ್ಯಾಂಕಿನ ಪ್ರದಿನಿಧಿ ಮೂಡಲ ಕೊಪ್ಪಲು ದಿನೇಶ್, ಸಂಘದ ಕಾರ್ಯದರ್ಶಿ ಜಿ.ಪುನೀತ್ ಕುಮಾರ್ ಸಭೆಗೆ ಸಂಘವು ಇವುಗಳ ಬಗ್ಗೆ ಕೈ ಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪಟಾಕಿ ಸತೀಶ್, ನಿರ್ದೇಶಕರಾದ ಜಿ.ಎಸ್.ವಿಶ್ವೇಶ್ವರಯ್ಯ, ಸಿ.ಟಿ.ಸ್ವಾಮಿ, ಕೆ.ಆರ್.ಮಂಜುನಾಥ್, ಸೋಮಪ್ಪ, ಡಿ.ಪುನೀತ್ ಧನಪಾಲ್, ಜಿ.ಕುಮಾರಸ್ವಾಮಿ,ಕಲ್ಯಾಣಮ್ಮ,ರುಕ್ಮಿಣಮ್ಮಹಳಿಯೂರು ಎಂ.ಡಿ.ಸಿ.ಸಿ ಶಾಖೆಯ ವ್ಯವಸ್ಥಾಪಕ ಪ್ರತಾಪ್ ಆಯಿರಹಳ್ಳಿ, ಸಂಘದ ಗುಮಾಸ್ತ ಸಿ.ಜಿ.ಜಗನ್ನಾಥ್ ಇದ್ದರು
