ಬೇರೆ ಊರಿಗೆ ಸರ್ಕಾರಿ ಶಾಲೆ ಸ್ಥಳಾಂತರ ಖಂಡಿಸಿ ಗ್ರಾಮಸ್ಥರಿಂದ ಬಂದ್, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಭರವಸೆ
ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಸರ್ಕಾರಿ ಪ್ರೌಢ ಶಾಲೆ ಬೇರೆ ಊರಿಗೆ ಶಿಪ್ಟ್ ಮಾಡಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಖಾನಾಪುರ ತಾಲೂಕಿನ ಶಾಲೆಗಳನ್ನ ಬಂದ್ ಮಾಡಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದ ವಿಧ್ಯಾರ್ಥಿಗಳ ಸಮಸ್ಯೆ ತಿಳಿದ ಕಾಂಗ್ರೆಸ್ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಇಟಗಿ ಗ್ರಾಮದಲ್ಲಿಯೇ ಸರಕಾರಿ ಶಾಲೆಯನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡಿದರು.
ಇಟಗಿ ಗ್ರಾಮದಲ್ಲೇ ಪ್ರೌಢ ಶಾಲೆ ಮುಂದುವರೆಸುವಂತೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಮಕ್ಕಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಂಜಲಿ ಸಂಬಂಧಿಸಿದ ಸಚಿವರಿಗೆ ಕರೆ ಮಾಡಿ ಇಟಗಿ ಗ್ರಾಮದ ಶಾಲೆಯನ್ನು ಸ್ಥಳಾಂತರ ಮಾಡದಂತೆ ಮನವಿ ಮಾಡಿದರು.
ಪಕ್ಕದೂರಿಗೆ ಪ್ರೌಢ ಶಾಲೆ ಶಿಪ್ಟ್ ಮಾಡಿದ್ದ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಮಾಜಿ ಶಾಸಕಿ ಅಂಜಲಿಗೆ ಧನ್ಯವಾದ ಹೇಳಿದರು.