ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ: ಉತ್ತರ ಕರ್ನಾಟಕದ ಭಕ್ತರಿಗೆ ಇಲ್ಲಿದೆ ಗುಡ್ ನ್ಯೂಸ್. ಕುಂದಾನಗರಿ ಬೆಳಗಾವಿಯಲ್ಲಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣವಾಗಲಿದೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯು ಬೆಳಗಾವಿ ಜಿಲ್ಲೆಯ ಕೋಳಿಕೊಪ್ಪ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಗೋಕಾಕ್ ನ ಲಕ್ಷ್ಮಿ ದೇವಿ ಪ್ರಸಿದ್ಧ. ಅದರಂತೆ ಲಕ್ಷ್ಮಿಗೆ ಜೋಡಿಯಾಗಿ ವೆಂಕಟೇಶ್ವರ ಸ್ವಾಮಿಯನ್ನ ಕೂಡಿಸೋಕೆ TTD ತೀರ್ಮಾನಿಸಿದೆ.
TTD ಶ್ರೀವಾಣಿ ಟ್ರಸ್ಟ್‌ನ ನಿಧಿಯಿಂದ 7 ಎಕರೆ ಭೂಮಿಯಲ್ಲಿ ಈ ದೇವಾಲಯ ನಿರ್ಮಾಣವಾಗಲಿದೆ. ಹೀಗಂತ ಟಿಟಿಡಿ ಸದಸ್ಯ ಎಸ್. ನರೇಶ್ ಕುಮಾರ್ ತಿಳಿಸಿದ್ದಾರೆ. ಈ ಹೊಸ ದೇಗುಲ ಉತ್ತರ ಕರ್ನಾಟಕದ ಜೊತೆಗೆ ಗೋವಾ ಹಾಗೂ ಮಹಾರಾಷ್ಟ್ರದ ಭಕ್ತಾದಿಗಳಿಗೆ ಅನುಕೂಲಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇವಾಲಯದ ನಿರ್ಮಾಣದ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಶಿಲಾನ್ಯಾಸ ಕಾರ್ಯಕ್ರಮ ಮತ್ತು ಪ್ರಾರಂಭ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ. ಇಂತಹ ಮಹತ್ವದ ನಿರ್ಧಾರವನ್ನು ಟಿಟಿಡಿಯು ಕೈಗೊಂಡಿರುವುದು ಭಕ್ತರ ಆತ್ಮಕ್ಕೆ ಶಾಂತಿ ಮತ್ತು ಸಂತೋಷ ತರುವ ವಿಷಯ. ಇದು ಹಿಂದೂ ಧರ್ಮದ ಬೆಳವಣಿಗೆಯೂ ಹೌದು, ಮತ್ತು ಸ್ಥಳೀಯ ಸಮುದಾಯದ ಸಂಕಲ್ಪಗಳ ಗೆಲುವೂ ಹೌದು ಎಂಬಂತಾಗಿದೆ.
ಇನ್ನು 2025ರ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿರುವ ವಾರ್ಷಿಕ ಬ್ರಹ್ಮೋತ್ಸವಕ್ಕಾಗಿ ತಿರುಮಲದಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಕಳೆದ ವರ್ಷ ಸಂಭವಿಸಿದ ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸುರಕ್ಷತೆ ವಹಿಸಲಾಗಿದೆ.
ಸೆಪ್ಟೆಂಬರ್ 28 ನಡೆಯುವ ಗರುಡ ಸೇವೆ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಭಕ್ತರ ನಿರ್ವಹಣೆಗೆ 1,500 ಹೊಸ ಕಲ್ಯಾಣ ಕಟ್ಟಿಗೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ನವದುರ್ಬಳ ಸಮಯದಲ್ಲಿ ಶಿಫಾರಸು ಪತ್ರಗಳ ಮೂಲಕ ಕೊಠಡಿ ಹಂಚಿಕೆಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಬದಲಾಗಿ 3,500 ಕೊಠಡಿಗಳನ್ನು ಆಫ್‌ಲೈನ್‌ನಲ್ಲಿ ಹಂಚಿಕೆ ಮಾಡಲಾಗುತ್ತದೆ.