ಮಂಗಳೂರು (ದಕ್ಷಿಣ ಕನ್ನಡ): ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನನ್ನು ಮಂಗಳೂರಿನ ಮೂಲ್ಕಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಯತಿರಾಜ್ (27 ವರ್ಷ), ಬಂಧಿತ ಯುವಕ.
ಮೂಲ್ಕಿ ಕಾರ್ನಾಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಈತನನ್ನು ಮೂಲ್ಕಿ ಪೊಲೀಸರು ಬಂಧಿಸಿ 1ಕೆಜಿ 200ಗ್ರಾಂ ಗಾಂಜಾ, 1ರಿಕ್ಷಾ, ಗಾಂಜಾ ಮಾರಾಟದಿಂದ ಬಂದ 300ರೂಪಾಯಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಆರೋಪಿತನನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.