ವರದಿ: ಸ್ಟೀಫನ್ ಜೇಮ್ಸ್
ಅಥಣಿ : ಕೌಟುಂಬಿಕ ಕಲಹದಿಂದ ತನ್ನ ಗಂಡನೊಂದಿಗೆ ಮನಸ್ತಾಪ ಮಾಡಿಕೊಂಡ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಣೆ ಮಾಡಿ, ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪೊಲೀಸರ ಸಹಕಾರದೊಂದಿಗೆ ಅವರ ಕುಟುಂಬಕ್ಕೆ ಒಪ್ಪಿಸುವ ಮೂಲಕ ನಿಜಪ್ಪ ಹಿರೇಮನಿ ದಂಪತಿಗಳು ಮಾನವೀಯತೆ ಮೆರೆದಿದ್ದಾರೆ.
ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕೆಲವು ದಿನಗಳ ಹಿಂದೆ ಮಧ್ಯರಾತ್ರಿ ಒಂಟಿ ಮಹಿಳೆ ತಿರುಗಾಡುವುದನ್ನು ಕಂಡು ಸಾರ್ವಜನಿಕರು ಅನಾಥ ಮಕ್ಕಳ ಮತ್ತು ನಿರ್ಗತಿಕರ ಸಂರಕ್ಷಣಾ ಸಂಸ್ಥೆ ನಡೆಸುತ್ತಿರುವ ನಿಜಪ್ಪ ಹಿರೇಮನಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ಹಿರೇಮನಿ ದಂಪತಿಗಳು ಮೊದಲು ಪೊಲೀಸ್ ಠಾಣೆಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಆ ಮಹಿಳೆಗೆ ತಮ್ಮ ಕೃಪಾ ಮತ್ತು ಆರೋಗ್ಯ ಸೇವಾ ಸಂಸ್ಥೆಯಲ್ಲಿ ಆಶ್ರಯ ನೀಡಿದರು.
ಅಸ್ವಸ್ಥಗೊಂಡ ಮಹಿಳೆಯನ್ನು ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಚಂದ್ರವ ಭೀಮಣ್ಣ ಮುಧೋಳ(35 ವರ್ಷ) ಎನ್ನಲಾಗಿದೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅವರು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಮಾನಸಿಕವಾಗಿ
ಬೀದಿ ಕಾಮಣ್ಣರ ಹಾವಳಿ, ಕಳ್ಳರ ಪ್ರಕರಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ
2000-010 1000 ಯಾವುದೋ ಕುಟುಂಬದ ಮಹಿಳೆಯ ಸಮಸ್ಯೆಯನ್ನು, ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ ಆ ಮಹಿಳೆಯನ್ನು ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದಲ್ಲದೆ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸತತ 10 ದಿನಗಳ ಕಾಲ ತಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದಾರೆ.
ಈ ಮಹಿಳೆ ಶೇಗುಣಸಿ ಗ್ರಾಮದವಳು ಎಂಬುದು ತಿಳಿದ ನಂತರ ಅಲ್ಲಿನ ಪಿಡಿಓ ಸಚಿನ ಪಾಟೀಲ ಅವರಿಗೆ ಕರೆ ಮಾಡಿ ಕುಟುಂಬಸ್ಥರನ್ನು ಪತ್ತೆಹಚ್ಚಲಾಯಿತು. ಶುಕ್ರವಾರ ಮಹಿಳೆಯ ಸಹೋದರ ಹನುಮಂತ ಹಾಗೂ ಗಂಡನ ಮನೆಯ ಸಂಬಂಧಿಕರನ್ನು ಕರೆಯಿಸಿ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಮಾಡಿದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರಿಗೆ ಮಹಿಳೆಯನ್ನು ಒಪ್ಪಿಸಲಾಲಾಗಿದೆ.
ಹಿರೇಮನಿ ದಂಪತಿಗಳು: ಈ ವೇಳೆ ಮಾತನಾಡಿದ ನಿಜಪ್ಪ ಹಿರೇಮನಿ, ಅಥಣಿ ಪಟ್ಟಣದಲ್ಲಿ ಮಧ್ಯರಾತ್ರಿ ಒಂಟಿ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿ ತಿರುಗಾಡುತ್ತಿರುವ ಮಾಹಿತಿಯನ್ನು ಸಾರ್ವಜನಿಕರು ಕರೆ ಮಾಡಿ ತಿಳಿಸಿದಾಗ, ಕೂಡಲೇ ಆಕೆಯನ್ನು ಅಲ್ಲಿಂದ ಕರೆತಂದು ನಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡಿದ್ದೇವೆ. ಆ ಮಹಿಳೆ ಸುರಕ್ಷಿತವಾಗಿ ಇಂದು ಮತ್ತೆ ಕುಟುಂಬದವರೊಂದಿಗೆ ಸೇರಿಕೊಂಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.