Sunday, September 21, 2025
Google search engine

Homeರಾಜ್ಯಸುದ್ದಿಜಾಲಸ್ಕೇಟಿಂಗ್ ಮ್ಯಾರಥಾನ್: ದಸರಾ 2025ರ ಅಂಗವಾಗಿ 60 ಕಿಮೀ ಉದ್ದದ ಸಾಹಸಮಯ ಯಾನಕ್ಕೆ ಚಾಲನೆ

ಸ್ಕೇಟಿಂಗ್ ಮ್ಯಾರಥಾನ್: ದಸರಾ 2025ರ ಅಂಗವಾಗಿ 60 ಕಿಮೀ ಉದ್ದದ ಸಾಹಸಮಯ ಯಾನಕ್ಕೆ ಚಾಲನೆ

ಚಾಮರಾಜನಗರ: ಚಾಲೆಂಜರ್ ಸ್ಕೇಟ್ ಅಕಾಡೆಮಿ ವತಿಯಿಂದ ಮೈಸೂರು ದಸರಾ 2025ರ ಅಂಗವಾಗಿ ಸ್ಕೇಟಿಂಗ್ ಹಾಗೂ ಮ್ಯಾರಥಾನ್ ಓಟವನ್ನು ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಮೈಸೂರಿನ ಅರಮನೆಯವರಿಗೆ ಸುಮಾರು 60 ಕಿಲೋಮೀಟರ್ ವರೆಗೆ ಸ್ಕೇಟ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

ಚಾಲೆಂಜರ್ಸ್ ಸ್ಕೇಟ್ ಅಕಾಡೆಮಿಯ ಪೂರ್ಖಾನ್ ಪಾಷಾ ಮಾತನಾಡಿ ಸ್ಕೇಟ್ ಅಕಾಡೆಮಿ ಚಾಮರಾಜನಗರದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಪ್ರತಿಭೆಗಳು ಇದ್ದು ಅವರೆಲ್ಲರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೈಸೂರು ದಸರಾ ಅಂಗವಾಗಿ ಮೈಸೂರು ಅರಮನೆಯವರಿಗೆ ಸುಮಾರು 60 ಕಿಲೋಮೀಟರ್ ಮ್ಯಾರಥಾನ್ ಆಯೋಜಿಸಿದೆ. ಸಂಸ್ಥೆಯ 9 ಮಕ್ಕಳು ವಿಶೇಷವಾಗಿ ಭಾಗವಹಿಸುತ್ತಿದ್ದಾರೆ ಎಂದರು.

ಚಾಲನೆಯನ್ನು ನೀಡಿದ ಹಸಿರುಪಡೆಯ ಕಾರ್ಯದರ್ಶಿ ಸತೀಶ್ ರವರು ಮಾತನಾಡಿ ಸ್ಕೇಟ್ ಅಕಾಡೆಮಿ ಸ್ಕೇಟಿಂಗ್ ಮ್ಯಾರಥಾನ್ ಆಯೋಜಿಸಿರುವುದು ಬಹಳ ಸಂತೋಷವಾದದ್ದು . ಗಡಿ ಜಿಲ್ಲೆಯಲ್ಲಿ ಈ ಕ್ರೀಡೆಗೆ ವಿಶೇಷವಾದ ಪ್ರೋತ್ಸಾಹ ನೀಡಿರುವುದು ಬಹಳ ಸಂತೋಷವೆಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಹದೇವಸ್ವಾಮಿ ಮಾತನಾಡಿ ಸ್ಕೇಟಿಂಗ್ ಒಂದು ವಿಶೇಷವಾದ ಕ್ರೀಡೆ .ಚಾಮರಾಜನಗರದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಸ್ಕೇಟ್ ಅಕಾಡೆಮಿಗೆ ಅಭಿನಂದನೆಗಳನ್ನು ತಿಳಿಸಿದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಖಾನ್ ರವರು ಶುಭಕೋರಿದರು. ಸ್ಕೇಟ್ ಅಕಾಡೆಮಿ ಕೋಚ್ ಫುರ್ಖಾನ್ ಪಾಷಾರವರನ್ನು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಶಾಲು , ಫಲಕ ನೀಡಿ ಗೌರವಿಸಿದರು.

9 ಯುವಕ ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನಗರಸಭೆಯ ಆರೋಗ್ಯ ಅಧಿಕಾರಿ, ಕೌಶಲ್ಯ ಸಂಸ್ಥೆಯ ಖಾನ್, ಲಕ್ಷ್ಮಿ ನರಸಿಂಹ ಸತೀಶ್ ಹಾಗೂ ಪೋಷಕರು ಸಾರ್ವಜನಿಕರು ಸಂಭ್ರಮದಿಂದ ಶುಭ ಕೋರಿದರು. ರಸ್ತೆಯಲ್ಲಿ ಸ್ಕೇಟಿಂಗ್ ಮ್ಯಾರಥಾ ನ್ ನೋಡಲು ಜನ ಸಂತೋಷದಿಂದ ವೀಕ್ಷಿಸಿದರು

RELATED ARTICLES
- Advertisment -
Google search engine

Most Popular