Monday, September 22, 2025
Google search engine

Homeವಿದೇಶಡಾ. ಆನಂದ ಸಂಕೇಶ್ವರಗೆ ಪ್ರತಿಷ್ಠಿತ ಸಿಬಾ ಪುರಸ್ಕಾರ

ಡಾ. ಆನಂದ ಸಂಕೇಶ್ವರಗೆ ಪ್ರತಿಷ್ಠಿತ ಸಿಬಾ ಪುರಸ್ಕಾರ

ವರದಿ: ಸ್ಟೀಫನ್ ಜೇಮ್ಸ್.

  • ಸೌತ್​ ಪವರ್​ಲಿಸ್ಟ್​ನಲ್ಲಿ ಸ್ಥಾನ *ಉದ್ಯಮ ರಂಗದ ಕೊಡುಗೆಗಾಗಿ ಪುರಸ್ಕಾರ* ದುಬೈನಲ್ಲಿ ಪ್ರದಾನ

ದುಬೈ: ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರಿಗೆ ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪುರಸ್ಕಾರ ಸಂದಿದ್ದು, ದುಬೈನಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ದುಬೈನ ಅಲ್​ ಹಬ್ತೂರ್​ ಪ್ಯಾಲೇಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್​ ಡಾ. ಅಹ್ಮದ್​ ಅಬ್ದುಲ್​ ರೆಹಮಾನ್​ ಅಲ್ಬನ್ನಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ, ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪರಿಚಯಿಸಿರುವ ಸೌತ್​ ಪವರ್​ಲಿಸ್ಟ್​-100 ಅನ್ನು ಅನಾವರಣಗೊಳಿಸಲಾಯಿತು.

ವಿಆರ್​ಎಲ್​ ಸಮೂಹದ ಎಂಡಿ ಡಾ. ಆನಂದ ಸಂಕೇಶ್ವರ ಅವರು 2025ರ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. ವಿಆರ್​ಎಲ್​ ಸಂಸ್ಥೆಯನ್ನು ದೇಶದ ಅತಿ ದೊಡ್ಡ ಸಾರಿಗೆ ಕಂಪನಿಯಾಗಿ, ಪ್ರಮಾಣ ಹಾಗೂ ಕಾರ್ಯಾಚರಣೆ ದಕ್ಷತೆಯಲ್ಲಿ ಅತ್ಯಂತ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಿದ್ದಾರೆ. ಈ ಗೌರವ ಕೇವಲ ವ್ಯಾಪಾರದ ಯಶಸ್ಸನ್ನು ಮಾತ್ರವಲ್ಲ ಲಾಜಿಸ್ಟಿಕ್ಸ್​ ಮೂಲಕ ಬೆಳವಣಿಗೆ ಮತ್ತು ದೇಶದ ಏಕೀಕರಣದಲ್ಲಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.

ಸೌತ್​ ಪವರ್​ಲಿಸ್ಟ್​ 100 ರಲ್ಲಿ ಇರುವ ಹಲವು ರಂಗಗಳ ಸಾಧಕರನ್ನೂ ಗೌರವಿಸಲಾಯಿತು. ಈ ಪಟ್ಟಿಯು ಉದ್ಯಮಗಳು ಮತ್ತು ಪರಂಪರೆಯಲ್ಲಿ ನಾಯಕತ್ವದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ಈ ಗೌರವಾನ್ವಿತರು ಜಾಗತಿಕ ವೇದಿಕೆಯಲ್ಲಿ ದಣ ಭಾರತದ ದೂರದೃಷ್ಟಿ ಮತ್ತು ಚೈತನ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಎಸ್​ಐಬಿಎ ಹೇಳಿದೆ.

ಇತರ ಪ್ರಮುಖ ಪುರಸ್ಕೃತರು:
ಅಶೋಕ್​ ಖೇಣಿ- ಆಡಳಿತ ನಿರ್ದೇಶಕರು, ನಂದಿ ಇನ್​ಫ್ರಾಸ್ಟ್ರಕ್ಚರ್​ ಕಾರಿಡಾರ್​ ಎಂಟರ್​ಪ್ರೆಸಸ್​ ಲಿಮಿಟೆಡ್​.
ಕವಿತಾ ದತ್ತ – ಜಂಟಿ ಆಡಳಿತ ನಿರ್ದೇಶಕರು, ಕೆಸಿಪಿ ಸಿಮೆಂಟ್ಸ್​.
ನಿರೂಪ್​ ರೆಡ್ಡಿ – ಸಂಸ್ಥಾಪಕರು, ಎನ್​ಎ ಆರ್ಕಿಟೆಕ್ಟ್ಸ್
ಶೈಲಜಾ ಕಿರಣ್​ -ಆಡಳಿತ ನಿರ್ದೇಶಕರು, ಮಾರ್ಗದರ್ಶಿ ಚಿಟ್​ ಫಂಡ್​ ಪ್ರೈವೇಟ್​ ಲಿಮಿಟೆಡ್​.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ – ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು- ಕೊಡಗು ಲೋಕಸಭೆ ಕ್ಷೇತ್ರದ ಸದಸ್ಯರು

RELATED ARTICLES
- Advertisment -
Google search engine

Most Popular